ಕುಕನೂರು-ಯಲಬುರ್ಗಾದಲ್ಲಿ ನಾಳೆಯಿಂದ ಗ್ರಾಮೀಣ ಹಬ್ಬ, ಕಲಾ ಸಂಭ್ರಮ

Halappa Acharya Minister
ಸಚಿವ ಹಾಲಪ್ಪ ಆಚಾರ
Published on

ಕುಕನೂರು: ಸಚಿವ ಹಾಲಪ್ಪ ಆಚಾರ್ (ಡಿ.1) ಜನ್ಮದಿನ ನಿಮಿತ್ತ ನ.26ರಿಂದ ಗ್ರಾಮೀಣ ಹಬ್ಬ, ಆರೋಗ್ಯ ಮಿತ್ರ ಹಾಗೂ ಕಲಾ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲಪ್ಪ ಆಚಾರ್ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಲಿಂಗಯ್ಯ ಉಳ್ಳಾಗಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ.26-27 ರಂದು ಯಲಬುರ್ಗಾ ಕ್ಷೇತ್ರದ 6 ಜಿಪಂ, 2 ಪಪಂ ವ್ಯಾಪ್ತಿಯಲ್ಲಿ ಪುರುಷರಿಗೆ ಕಬಡ್ಡಿ, ಮಹಿಳೆಯರಿಗೆ ಖೋಖೋ ಹಾಗೂ ವಿವಿಧ ಕ್ರೀಡಾಕೂಟ ಆಯೋಜಿಸಲಾಗುವುದು. 18 ರಿಂದ 25 ವರ್ಷದೊಳಗಿನವರು ಸ್ಪರ್ಧಿಸಬಹುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ನ.29ರಂದು ಯಲಬುರ್ಗಾದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕುಕನೂರು ಎಪಿಎಂಸಿಯಲ್ಲಿ ಡಿ.1ರಂದು ಸಂಜೆ 6 ಗಂಟೆಗೆ ಕಲಾ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕಲಾವಿದರಿಂದ ಕಲಾ ಪ್ರದರ್ಶನ, ಉಡುಪಿಯ ಕಲಾವಿದ ದಯಾನಂದ ತಂಡದಿಂದ ರಸಮಂಜರಿ ಹಾಗೂ ರಾಯಚೂರಿನ ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಹಿತಿಗೆ 9060340239, 9844773335, 8497093331, 7259547575 ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು.

ಕುಕನೂರು ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಹಾಳಕೇರಿ, ಕಾರ್ಯದರ್ಶಿ ಕರಬಸಯ್ಯ ಬಿನ್ನಾಳ, ಪಪಂ ಸದಸ್ಯರಾದ ಮಲ್ಲಿಕಾರ್ಜುನ ಚೌದ್ರಿ, ಶಿವರಾಜಗೌಡ, ಬಾಲರಾಜ ಗಾಳಿ, ಪ್ರಮುಖರಾದ ಮಂಜುನಾಥ ನಾಡಗೌಡ, ಮಹಾಂತೇಶ ಹೂಗಾರ, ಅವಿನಾಶ ಅರಕೇರಿ, ಚೇತನ ಕಲಾಲ, ಪ್ರವೀಣ್ ರಡ್ಡೇರ, ಮುತ್ತು ಕುರಿ, ಪ್ರಶಾಂತ ಕರುಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net