ರುದ್ರಭೂಮಿ ಮಂಜೂರು ಮಾಡಿ: ಶಿರಸ್ತೇದಾರ್‌ಗೆ ಗಂಗಾಮತ ಕ್ಷೇಮಾಭಿವೃದ್ಧಿ ಸಂಘ ಮನವಿ

Kukanuru Gangamatasta Appeal
ಕುಕನೂರು ತಹಸಿಲ್ ಕಚೇರಿಯಲ್ಲಿ ಶಿರಸ್ತೇದಾರ್ ಸುರೇಶ ಬಾಳೆಹೊಸೂರುಗೆ ಗಂಗಾಮತಸ್ಥರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಮನವಿ ಸಲ್ಲಿಸಿತು.
Published on

ಕುಕನೂರು: ರುದ್ರಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಗಂಗಾಮತಸ್ಥರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶಿರಸ್ತೇದಾರ್ ಸುರೇಶ ಬಾಳೆಹೊಸೂರುಗೆ ಮನವಿ ಸಲ್ಲಿಸಿತು.

ಕೊರಮ, ಗಂಗಾಮತ, ಪದ್ಮಶಾಲಿ, ತಳವಾರ ಸೇರಿದಂತೆ ಇತರ ಸಮಾಜದವರು ಕೂಡ ಈಗಿರುವ ರುದ್ರಭೂಮಿ ಬಳಸುತ್ತಿದ್ದು, ಸದ್ಯ ರೈಲ್ವೆ ನಿಲ್ದಾಣ ನಿರ್ಮಾಣದಿಂದ ಅತಿಕ್ರಮಣವಾಗಿದೆ. ಬೇರೆ ಸಮುದಾಯದವರಿಗೂ ಶವಸಂಸ್ಕಾರ ಮಾಡಲು ಕಷ್ಟವಾಗುತ್ತಿದೆ. ಇದರಿಂದ ಕೂಡಲೇ ರುದ್ರಭೂಮಿ ಗುರುತಿಸಿ, ಸಮುದಾಯಕ್ಕೆ ಮಂಜೂರು ಮಾಡಬೇಕು. ಈ ಮೂಲಕ ಸ್ಮಶಾನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಸಮುದಾಯದ ಅಧ್ಯಕ್ಷ ಬುಡ್ಡಪ್ಪ ಬಾರಕೇರ, ಕಾರ್ಯದರ್ಶಿ ಬಾಳಪ್ಪ ಹೊಳಿಯಪ್ಪ ಬಾರಕೇರ, ಖಜಾಂಚಿ ಶಿವಪುತ್ರಪ್ಪ ಮಡ್ಡಿ, ಮುಖಂಡರಾದ ಭೀಮಪ್ಪ ಬಾರಕೇರ, ಗುದ್ನೆಪ್ಪ, ಬಾಳಪ್ಪ ಈಟಿ, ಬಸವರಾಜ ಕೋನಾರಿ, ಪಕೀರಪ್ಪ ವಾಲಿಕಾರ, ಹಂಚಿನಾಳಪ್ಪ ವಾಲಿಕಾರ, ಮಂಜುನಾಥ ಬಾರಕೇರ, ಗುರು ಬಾರಕೇರ, ಶಿವಪುತ್ರಪ್ಪ ಮಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net