ಮಕ್ಕಳ ಸುರಕ್ಷತೆ ಆದ್ಯತೆ ಆಗಲಿ; ಸಿಡಿಪಿಒ ಸಿಂಧು ಯಲಿಗಾರ ಹೇಳಿಕೆ

020922 Pooshan Masacharani
ಕುಕನೂರಿನಲ್ಲಿ ಪೋಷಣ್ ಮಾಸಾಚರಣೆಯ ಜಾಥಾಕ್ಕೆ ಸಿಡಿಪಿಒ ಸಿಂಧು ಯಲಿಗಾರ ಚಾಲನೆ ನೀಡಿದರು.
Published on

ಕುಕನೂರು: ಮಕ್ಕಳ ಸುರಕ್ಷತೆ ಹಾಗೂ ಸ್ವಚ್ಛತೆಗೆ ಪಾಲಕರು ಆದ್ಯತೆ ನೀಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ಹೇಳಿದರು. ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನೆಯಿಂದ ಪೋಷಣ್ ಮಾಸಾಚರಣೆ ನಿಮಿತ್ತ ಏರ್ಪಡಿಸಿದ್ದ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಗುರುತಿಸಿ ಹೋಗಲಾಡಿಸುವುದು ಜಾಥಾದ ಉದ್ದೇಶವಾಗಿದೆ. ಮಕ್ಕಳು ಹಾಗೂ ಮಹಿಳೆಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ವೈಯಕ್ತಿಕ ಶುಚಿತ್ವದ ಕಡೆಗೆ ಗಮನ ಹರಿಸಬೇಕು. ಈ ಕುರಿತು ಸೆಪ್ಟೆಂಬರ್ ತಿಂಗಳಪೂರ್ತಿ ಪ್ರತಿದಿನ ಒಂದೊಂದು ಕಾರ್ಯಕ್ರಮ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪೋಷಣ್ ಅಭಿಯಾನದ ತಾಲೂಕು ಸಂಯೋಜಕ ವಿರೂಪಾಕ್ಷಯ್ಯ ಕಟಗಿಮಠ, ಮೇಲ್ವಿಚಾರಕರಾದ ದೀಪಾ ಚನ್ನಳ್ಳಿ, ಗಂಗಾ, ಗಿರಿಜಾ ಕಡಿವಾಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net