ಬನ್ನಿಕೊಪ್ಪದಲ್ಲಿ ತಿರುಪತಿ-ಹುಬ್ಬಳ್ಳಿ ರೈಲು ನಿಲುಗಡೆ: ಸೋಮವಾರ ಬಂದ ಟ್ರೈನ್‌ಗೆ ಗ್ರಾಮಸ್ಥರಿಂದ ಪೂಜೆ

181022 Tirupati-Hubballi Train
ಬನ್ನಿಕೊಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಂಡ ತಿರುಪತಿ-ಹುಬ್ಬಳ್ಳಿ ರೈಲಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
Published on

ಕುಕನೂರು: ತಾಲೂಕಿನ ಬನ್ನಿಕೊಪ್ಪ ರೈಲ್ವೆ ನಿಲ್ದಾಣದಲ್ಲಿ ತಿರುಪತಿ-ಹುಬ್ಬಳ್ಳಿ ರೈಲು ನಿಲುಗಡೆ ಸೋಮವಾರದಿಂದ ಆರಂಭವಾಗಿದ್ದು, ಗ್ರಾಮಸ್ಥರು ರೈಲಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ತಿರುಪತಿಯಿಂದ ಹುಬ್ಬಳ್ಳಿಗೆ ಹೋಗುವ ರೈಲು ಬನ್ನಿಕೊಪ್ಪ ರೈಲ್ವೆ ಸ್ಟೇಷನ್‌ನಲ್ಲಿ ನಿಲುಗಡೆಗೆ ಸುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದರು.

ಕರೊನಾ ಸಂದರ್ಭದಲ್ಲಿ ಕೆಲವು ದಿನ ಸ್ಟಾಪ್ ಇದ್ದು, ನಂತರ ರೈಲು ನಿಲುಗಡೆಯಾಗುತ್ತಿರಲಿಲ್ಲ. ಹೀಗಾಗಿ ಬನ್ನಿಕೊಪ್ಪ ಗ್ರಾಮಸ್ಥರು, ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿಗೆ ಮನವಿ ಸಲ್ಲಿಸಿದ್ದರು. ಈಗ ಮೊದಲಿನಂತೆ ರೈಲು ನಿಲುಗಡೆಯಾಗಲಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ನಿವೃತ್ತ ಯೋಧ ನಾಗರಾಜ ವೆಂಕರಡ್ಡಿ ವೆಂಕಟಾಪುರ, ಮುಖಂಡರಾದ ವೆಂಕರಡ್ಡಿ ಯರಾಶಿ, ಸಿದ್ದನಗೌಡ ತೆಗ್ಗಿನಮನಿ, ವಿಜಯ ಯರಾಶಿ, ವೀರಣ್ಣ ಗೊಂದಿ, ಹನುಮಂತಗೌಡ ಆದಾಪುರ, ಸುರೇಶ ಯರಾಶಿ, ವೀರಣ್ಣ ಸಜ್ಜನ್, ಹನುಮಂತ ಮಾಳೆಕೊಪ್ಪ, ರಾಜು ಮಾಳೆಕೊಪ್ಪ, ರಮೇಶ ತಳವಾರ್, ಲೋಕೇಶ್ ವೀರಾಪುರ, ಶೇಕ್ಸಾವಲಿ ನದಾಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net