ಕುಕನೂರಿನಲ್ಲಿ ದೀಕ್ಷಾ ಮಹೋತ್ಸವ ಶೋಭಾಯಾತ್ರೆ

26KKNR-01
ಕುಕನೂರಿನಲ್ಲಿ ಜೈನ್ ಸಮುದಾಯದ ಉದ್ಯಮಿ ಸುಮುತಿ ಜೀ.ಪೋಕರ್ಣ ಹಾಗೂ ಪ್ರೀತಿ ಜೀ.ಪೋಕರ್ಣ ಅವರ ದೀಕ್ಷಾ ಮಹೋತ್ಸವ ಅಂಗವಾಗಿ ಶೋಭಾಯಾತ್ರೆ ಜರುಗಿತು.
Published on

ಕುಕನೂರು: ಜೈನ ಸಮುದಾಯದ ಉದ್ಯಮಿ ಸುಮುತಿ ಜೀ. ಪೋಕರ್ಣ ಹಾಗೂ ಪ್ರೀತಿ ಜೀ.ಪೋಕರ್ಣ ಅವರ ದೀಕ್ಷಾ ಮಹೋತ್ಸವದ ಅಂಗವಾಗಿ ಶೋಭಾಯಾತ್ರೆ ಮೆರವಣಿಗೆ ಭಾನುವಾರ ಜರುಗಿತು.

ಅನೇಕ ವರ್ಷಗಳಿಂದ ಉದ್ಯಮಿಯಾಗಿ ಸೇವೆ ಸಲ್ಲಿಸಿ, ಮನೆ, ಕುಟುಂಬಸ್ಥರನ್ನು ತೇಜಿಸಿ ಜೈನ್ ಭಗವತಿ ದೀಕ್ಷಾವನ್ನು ರಾಜಸ್ಥಾನದ ಜೈಪುರದಲ್ಲಿ ಫೇ.7ರಂದು ಪಡೆಯಲಿದ್ದಾರೆ. ಅದರ ನಿಮಿತ್ತ ಜೈನ್ ಸಮುದಾಯದ ಮುಖಂಡರು, ಮಹಿಳೆಯರು, ಯುವಕ, ಯುವತಿಯರು ಮೆರವಣಿಗೆ ನಡೆಸಿದರು. ಪ್ರಮುಖರಾದ ಜಸವಂತರಾಜ್ ಜೈನ್, ಮದನ್‌ಲಾಲ್, ಸೋಹನ್‌ಲಾಲ್, ಕಾಂತಿಲಾಲ್, ಮಹಾವೀರ ಚಂದ, ಅಜೀತಕುಮಾರ, ಏವಂತಕುಮಾರ, ಹರ್ಷಿತ್‌ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net