ಜಾತಿ ನಿಂದನೆ 13 ಜನರ ವಿರುದ್ಧ ಕೇಸ್

Arrest Kaidhi
Published on

ಕುಕನೂರು: ಯರೇಹಂಚಿನಾಳದಲ್ಲಿ ಶುಕ್ರವಾರ ರಾತ್ರಿ ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಹಲ್ಲೆ ಆರೋಪದಡಿ ಗ್ರಾಮದ 13 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

ಯರೇಹಂಚಿನಾಳ ಬಸ್ ನಿಲ್ದಾಣ ಬಳಿ ಸರ್ಕಸ್ ನಡೆಯುತ್ತಿದ್ದಾಗ ಅಲ್ಲಿ ನಿಂತಿದ್ದ ಶರಣಪ್ಪ ಶಿವಪ್ಪ ಯಲೇಜಗುಳೇದ ಎಂಬಾತ ಪಕ್ಕದಲ್ಲಿ ಕುಳಿತಿದ್ದ ಹರಿಜನ ಲಲಿತಮ್ಮ ಶರಣಪ್ಪ ಮಟ್ಟನವರ ಎಂಬುವರ ಮೇಲೆ ಬಿದ್ದಿದ್ದಾನೆ. ಬಳಿಕ ಮಹಿಳೆ ಆತನ ಕೊರಳು ಪಟ್ಟಿ ಹಿಡಿದು ಬೈದಿದ್ದಾರೆ. ಜಗಳ ಬಿಡಿಸಲು ಬಂದ ಮಹಿಳೆ ಮೈದುನ ಹನುಮಂತ ಹಾಗೂ ಮಾವನ ಮಗ ರಮೇಶ್‌ಗೆ ಗ್ರಾಮದ ಸಿದ್ದರೆಡ್ಡಿ ಯಲೇಜಗುಳೇದ ಹಾಗೂ ಬಸವರಾಜ ಹಣಸಿ ಒದ್ದು, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಮಹಿಳೆಯ ಅತ್ತೆ ಹನುಮವ್ವ, ಆಕೆಯ ಗಂಡ ಶರಣಪ್ಪ ಹಾಗೂ ರಾಕೇಶ, ಪ್ರಕಾಶ ಎಂಬುವವರ ಮೇಲೆ ಈರಣ್ಣ ಹನಸಿ, ಹನುಮಂತಪ್ಪ ಹನಸಿ, ಈರಯ್ಯ ಹಿರೇಮಠ ಅವರು ಮನೆಯಲ್ಲಿ ಕೂಡಿ ಹಾಕಿ ಬಡಿದಿದ್ದಾರೆ. ಮನೆಯ ಹೊರಗಡೆ ಇದ್ದ ಮಹಿಳೆಯ ಮಗಳು ಅಕ್ಷತಾ ಹಾಗೂ ಆಕೆಯ ಅಕ್ಕ ಪ್ರೇಮಾ ಅವರಿಗೂ ಥಳಿಸಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.

ಈ ಸಂಬಂಧ ಗ್ರಾಮಸ್ಥರಾದ ಶರಣಪ್ಪ ಶಿವಪ್ಪ ಯಲೇಜಗುಳೇದ, ಸಿದ್ದರೆಡ್ಡಿ ಯಲೇಜಗುಳೇದ, ಬಸವರಾಜ ಹಣಸಿ, ಈರಣ್ಣ ಹಣಸಿ, ಹನುಮಂತಪ್ಪ ಹಣಸಿ, ಈರಯ್ಯ ಹಿರೇಮಠ, ನಿಂಗಪ್ಪ ಹಣಸಿ, ಆನಂದ ಹಣಸಿ, ಯಂಕಪ್ಪ ಯಲೇಜಗುಳೇದ, ಸುರೇಶ ಮೇಟಿ, ಸಂಕೇತ ಯಲೇಜಗುಳೇದ, ದೇವಪ್ಪ ಹಣಸಿ, ವಸಂತ ಎಂಬುವವರ ವಿರುದ್ಧ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net