ತಂಬಾಕು ಬಳಕೆಯಿಂದ ಸಾವು ಸನ್ನಿಹಿತ

Kukanour world tabacco day
ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞ ಡಾ.ಸಿ.ಎಂ. ಹಿರೇಮಠ ತಂಬಾಕು ಪದಾರ್ಥಗಳ ಪರಿಣಾಮಗಳ ಬಗ್ಗೆ ತಿಳಿಸಿದರು. ಆಪ್ತ ಸಮಾಲೋಚಕ ಅಮರೇಶ ಅಂಗಡಿ, ದಂತ ಆರೋಗ್ಯಾಧಿಕಾರಿ ಅಭಿಷೇಕ್, ಎನ್‌ಸಿಡಿ ಶುಶ್ರೂಷಕ ಅಧಿಕಾರಿ ಮಾರುತಿ ಇತರರಿದ್ದರು.
Published on

ಕುಕನೂರು: ತಂಬಾಕು ಆರೋಗ್ಯಕ್ಕೆ ಹಾನಿಕರ. ಇದರ ಬಳಕೆಯಿಂದ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಸಿ.ಎಂ.ಹಿರೇಮಠ ಹೇಳಿದರು.

ತಾಲೂಕಿನ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂಬಾಕು ಶ್ವಾಶಕೋಶದ ವಿವಿಧ ಕೋಣೆಗಳನ್ನು ತಲುಪಿದರೆ, ಸಿಗರೇಟಿನ ಹೊಗೆ ಕ್ಯಾನ್ಸರ್ ಕಾರಕ ಅಂಶಗಳೊಂದಿಗೆ ಶ್ವಾಶಕೋಶ ತಲುಪುತ್ತದೆ. ಇದರಿಂದ ಕ್ಯಾನ್ಸರ್ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಇಷ್ಟಲ್ಲದೆ ಸಿಗರೇಟ್ ಸೇದುವುದು ಮತ್ತು ತಂಬಾಕು ಸೇವನೆಯಿಂದ ಬಾಯಿ, ಪುಪ್ಪಸ, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಕಿಡ್ನಿ ಮತ್ತು ಲಿವರ್, ಬಹು ಅಂಗಾಂಗ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ ಸಂಭವಿಸಿ ಸಾವು ಸನ್ನಿಹಿತವಾಗುತ್ತದೆ. ಇನ್ನು ಗರ್ಭಿಣಿಯರು ತಂಬಾಕು ಸೇವನೆ, ಧೂಮಪಾನ ಮಾಡುವುದರಿಂದ ಅಥವಾ ಪರೋಕ್ಷ ಸೇವನೆಗೆ ಒಳಗಾಗುವುದರಿಂದ ಮಗುವಿನ ತೂಕ ಕುಗ್ಗುವಿಕೆ, ಅಂಗವಿಕಲತೆ, ಹೃದಯ ಮತ್ತು ಮಿದುಳು ಸಮಸ್ಯೆಗೆ ಒಳಗಾಗುತ್ತದೆ. ಗರ್ಭಿಣಿಯರಲ್ಲಿ ಬಿಪಿ ಹೆಚ್ಚಾಗಿ ಸಮಸ್ಯೆ ಉಂಟಾಗುವುದು ಎಂದರು.

ಸಿಬ್ಬಂದಿ ಲಕ್ಷ್ಮಣ ಘಂಟಿ, ಅಬ್ದುಲ್ ಖೈರ್, ಗವಿಸಿದ್ದಪ್ಪ, ಶ್ರೀಕಾಂತ, ಯಮನೂರಪ್ಪ ಸುಮಿತ್ರಾ, ರತ್ನಮ್ಮ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net