

ಕುಕನೂರು: ವಾಜಪೇಯಿ ವಸತಿ ಯೋಜನೆಗೆ ಅರ್ಹ 47 ಫಲಾನುಭವಿಗಳ ಆಯ್ಕೆಗೆ ಒತ್ತಾಯಿಸಿ ಫಲಾನುಭವಿಗಳು ಪಟ್ಟಣದಲ್ಲಿ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ 2021-22ನೇ ವಾಜಪೇಯಿ ವಸತಿ ಯೋಜನೆಯಡಿ 47 ಫಲಾನುಭವಿಗಳನ್ನು ಕೇಂದ್ರ ಸರ್ಕಾರದ ಯೋಜನೆಗೆ ಆಯ್ಕೆ ಮಾಡಿಲ್ಲ. ಈಗಾಗಲೇ ಮನೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಯೋಜನೆಯಡಿ ಮನೆ ನಿರ್ಮಾಣ ಹಣ ಬಿಡುಗಡೆ ಮಾಡಿಸಬೇಕು. ಪಪಂ ಹಣ ಬಿಡುಗಡೆ ಮಾಡುವುದಿಲ್ಲವೆಂದು ನೋಟಿಸ್ ನೀಡಿದೆ. ಸಾಲ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 47 ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಫಲಾನುಭವಿಗಳಾದ ಸಂತೋಷ ಸುಲಾಕೆ, ಮಂಜುನಾಥ ಅಂಗಡಿ, ಸುಭಾಷ್ ಅಳವಂಡಿ, ಮಲ್ಲಪ್ಪ ಬಂಗಿ, ಶಿವಣ್ಣ ಇತರರಿದ್ದರು.