ಹೊಗೆ ಮುಕ್ತ ಗ್ರಾಮದ ಸಂಕಲ್ಪ; ಪಿಡಿಒ ಆನಂದ ಯಲಿಗಾರ ಹೇಳಿಕ

10082021 Kukanoor Gas Kit Delivery
Published on

ಉಜ್ವಲ ಯೋಜನೆಯಡಿ ಗ್ಯಾಸ್ ಕಿಟ್‌ಗಳ ವಿತರಣೆ


ಕುಕನೂರು : ಹೊಗೆ ಮುಕ್ತ ಗ್ರಾಮಗಳ ಸಂಕಲ್ಪ ಹಾಗೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೊಳಿಸಿದೆ ಎಂದು ಪಿಡಿಒ ಆನಂದ ಯಲಿಗಾರ ಹೇಳಿದರು.

ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಿಳೆಯರಿಗೆ ಉಚಿತ ಗ್ಯಾಸ್ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ರಾಮಸ್ಥರು ಗ್ಯಾಸ್ ಸಿಲಿಂಡರ್‌ಗಾಗಿ ಬೇರೆ ಕಡೆ ಹೋಗಬೇಕಾಗಿತ್ತು. ಗ್ರಾಮದಲ್ಲೇ ಏಜೆನ್ಸಿ ಆಗಿರುವುದರಿಂದ ಬನ್ನಿಕೊಪ್ಪ, ಭಾನಾಪುರ, ಲಕಮಾಪುರ, ಅಡವಿಹಳ್ಳಿ, ಚಿತ್ತಾಪುರ ಗ್ರಾಮಸ್ಥರಿಗೂ ಅನುಕೂಲವಾಗಿದೆ ಎಂದರು. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕಕ್ಕಾಗಿ 200 ಅರ್ಜಿಗಳು ಬಂದಿದ್ದು, 193 ಸ್ವೀಕೃತವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net