ಸರ್ಕಾರ ಕೊಪ್ಪಳ ವಿವಿ ಮುಂದುವರೆಸಲಿ, ಸಿಎಂ ಸಿದ್ದರಾಮಯ್ಯಗೆ ಶಾಸಕ ಬಸವರಾಜ ರಾಯರಡ್ಡಿ ಪತ್ರ

Separate University
ಬಸವರಾಜ ರಾಯರಡ್ಡಿ ಬರೆದ ಪತ್ರ.
Published on

ಕುಕನೂರು: ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಂದುವರೆಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಬುಧವಾರ ಪತ್ರ ಬರೆದಿದ್ದಾರೆ.

ಕೊಪ್ಪಳದಲ್ಲಿ ಹಿಂದಿನ ರಾಜ್ಯ ಸರ್ಕಾರ ಪ್ರತ್ಯೇಕ ವಿವಿಯನ್ನು ಅಸ್ಥಿತ್ವಕ್ಕೆ ತರಲು ಆದೇಶಿಸಿತ್ತು. ಆದೇಶದಲ್ಲಿ ಜಮೀನು ಖರೀದಿ ಮಾಡಬಾರದು. ಕಟ್ಟಡ ಕಟ್ಟಬಾರದು ಮತ್ತು ಯಾವುದೇ ಮೂಲ ಸೌಲಭ್ಯಗಳನ್ನು ತ್ವರಿತವಾಗಿ ನೀಡಲು ಆಗುವುದಿಲ್ಲ ಎಂದು ಸೂಚಿಸಿ ಕೇವಲ 2 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಲಾಗಿತ್ತು. ಕೂಡಲೇ ವಿಶ್ವವಿದ್ಯಾಲಯವನ್ನು ಆರಂಭಿಸಿ ಕುಲಪತಿಗಳನ್ನು ಮಾತ್ರ ನೇಮಕ ಮಾಡಿ ಇತರ ಸಿಬ್ಬಂದಿ ನೇಮಕ ಮಾಡದೇ ಬೇರಾವ ಹುದ್ದೆಗಳಿಗೆ ಮಂಜೂರಾತಿ ನೀಡಿಲ್ಲ. ಇದು ಹೆಸರಿಗೆ ಮಾತ್ರ ವಿಶ್ವವಿದ್ಯಾಲಯ ಯಾವುದೇ ಪ್ರಯೋಜನ ಇಲ್ಲ ಎಂದು ಕಂಡು ಬರುತ್ತದೆ ಎಂದು ಶಾಸಕ ತಿಳಿಸಿದ್ದಾರೆ.

ಈಗಾಗಲೇ 4-5 ವರ್ಷಗಳಿಂದ ಹಿಂದಿನ ಸರ್ಕಾರ ಮಾಡಿರುವ ತಪ್ಪಿನಿಂದ ಮೂಲ ಸೌಲಭ್ಯ ಹಾಗೂ ಸಿಬ್ಬಂದಿ ಇಲ್ಲದೇ ವಿವಿಗಳು ಅಸ್ಥಿತ್ವದಲ್ಲಿವೆ. ಬೀದರ ಜಿಲ್ಲೆ ಒಂದನ್ನು ಬಿಟ್ಟು ಉಳಿದ 7ವಿವಿಗಳನ್ನು ಮುಚ್ಚಬೇಕೆಂದು ಸರ್ಕಾರ ತಾತ್ವಿಕ ನಿಲುವನ್ನು ತೆಗೆದುಕೊಂಡಿದೆ. ಹಣಕಾಸಿನ ಮತ್ತು ವಿಶ್ವವಿಶ್ವದ್ಯಾಲಯದ ಶೈಕ್ಷಣಿಕ ಮಟ್ಟದ ವಿಚಾರದಿಂದ ಇದು ಒಳ್ಳೆಯ ನಿರ್ಧಾರವಾಗಿರಬಹುದು.

ಆದರೆ, ಕೊಪ್ಪಳ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಸಾಕ್ಷರತಾ ಪ್ರಮಾಣ ಕಡಿಮೆಯಿದ್ದು, ರಾಜ್ಯದ ಸರಾಸರಿಯಂತೆ ಅತೀ ಕಡಿಮೆ ಪದವೀಧರರನ್ನು ಹೊಂದಿದೆ. ಇದರಿಂದ ಕೊಪ್ಪಳ ವಿವಿಯನ್ನು ಮುಂದುವರೆಸುವುದು ಸೂಕ್ತ. ವಿಶೇಷ ಪ್ರಕರಣವೆಂದು ಪರಿಗಣಿಸಿ, ವಿವಿಯನ್ನು ಮುಂದುವರೆಸಿ, ಮುಂದಿನ ವರ್ಷದಲ್ಲಿ ವಿವಿಗೆ ಬೇಕಾದ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net