ರೈತರಿಗೆ ಹರುಷ ತಂದ ರೋಹಿಣಿ

RAIN
ಕುಕನೂರು ತಾಲೂಕಿನ ಭಾನಾಪುರ ಸಮೀಪ ಗುರುವಾರ ಸುರಿದ ರೋಹಿಣಿ ಮಳೆ.
Published on

ಕುಕನೂರು: ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತವಾಗಿದ್ದು, ಈಗಾಗಲೇ ಹೆಸರು ಬಿತ್ತನೆ ಮಾಡಿದ ರೈತರಿಗೆ ಗುರುವಾರ ಸುರಿದ ರೋಹಿಣಿ ಮಳೆ ವರವಾಗಿ ಪರಿಣಮಿಸಿದೆ.

ತಾಲೂಕಿನ ತಳಕಲ್, ಭಾನಾಪುರ, ಬೆಣಕಲ್ ಹಾಗೂ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಯಾವುದೇ ಅನಾಹುತ ಆಗಿಲ್ಲ. ಧಾರಾಕಾರ ಮಳೆಯಿಂದ ಕೆರೆ, ಹಳ್ಳಗಳು ತುಂಬಿಕೊಂಡಿವೆ. ಅಲ್ಲದೇ ಜೂ.8ಕ್ಕೆ ಮೃಗಶಿರ ಮಳೆ ಕೂಡಲಿದೆ.

ಕಳೆದ ನಾಲ್ಕು ವರ್ಷದಿಂದ ರೋಹಿಣಿ ಮಳೆ ಕಾಣದ ರೈತರು ಈ ಬಾರಿ ಕಣ್ತುಂಬಿಕೊಂಡಿದ್ದಾರೆ. ಆದರೆ, ಕುಕನೂರು ಹೋಬಳಿಯ ಕುಕನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಿಗೆ ನಿರೀಕ್ಷೆಯಷ್ಟು ಮಳೆಯಾಗದಿರುವುದು ಬಿತ್ತನೆಗೊಂಡ ಬೆಳೆಗಳ ರಕ್ಷಣೆ ಸವಾಲಾಗಿದೆ.

ತಳಕಲ್ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ 15 ರಿಂದ 20 ದಿನಗಳ ಹೆಸರು ಬೆಳೆ ಇದೆ. ಇದೇ ರೀತಿ ಮಳೆಯಾದರೆ ಫಸಲು ಕೈಸೇರುವಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net