ಗುರುಗಳ ಸ್ಮರಣೆ ಶ್ಲಾಘನೀಯ

Kukanur Guruvandana
ಸಿದ್ನೇಕೊಪ್ಪ ಸಹಿಪ್ರಾ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಸಂಗಪ್ಪ ಜೀವಣ್ಣವರ್ ಭಾನುವಾರ ಉದ್ಘಾಟಿಸಿದರು. ಪ್ರಮುಖರಾದ ಬಸವಂತಪ್ಪ ಹಳ್ಳೂರ, ಟಿ.ಎಫ್.ನೂರಬಾಷ, ಆರ್.ಬಿ ಅಬ್ಬಿಗೇರಿ, ದೇವಪ್ಪ ಕಾಳಿ, ಶಿವಲೀಲಾ ಹಿರೇಮಠ ಇದ್ದರು.
Published on

ಕುಕನೂರು: ವಿದ್ಯಾರ್ಥಿಗಳಿಂದ ಶಿಕ್ಷಕರ ಸ್ಮರಣೆ-ಸನ್ಮಾನ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಸಂಗಪ್ಪ ಜೀವಣ್ಣವರ್ ಹೇಳಿದರು.

ಸಿದ್ನೇಕೊಪ್ಪ ಸಹಿಪ್ರಾ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಗಳಿಂದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಶಿಕ್ಷಕರದು ಪವಿತ್ರ ವೃತ್ತಿ. ವಿದ್ಯಾರ್ಥಿಗಳ ಭವಿಷ್ಯ ಮನದಲ್ಲಿಟ್ಟುಕೊಂಡು ಶಿಕ್ಷಕರು ಪಾಠ ಮಾಡಬೇಕು. ಪಾಠದಿಂದ ಅವರ ಬದುಕು ಬದಲಾಗಬೇಕು. ಅವರು ಉನ್ನತ ಸ್ಥಾನದಲ್ಲಿ ಬೆಳೆಯಬೇಕು. ಅಂದಾಗ ಗುರುಗಳ ಶ್ರಮ ಸಾರ್ಥಕ ಎಂದರು.

ಗ್ರಾಮದಲ್ಲಿ ನಿವೃತ್ತ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹೂಗಳಿಂದ ಸ್ವಾಗತಿಸಿದರು. ಹಳೆ ವಿದ್ಯಾರ್ಥಿನಿಯರಾದ ಕಾವೇರಿ ಹಿರೇಮಠ, ಬಸಮ್ಮ ತುಕ್ಕಣ್ಣವರ್, ಅನ್ನಪೂರ್ಣಾ ಮನಗೂಳಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶೇಖಪ್ಪ ಗದಗಿನ್ ಅಧ್ಯಕ್ಷತೆ, ಪ್ರಮುಖ ಶಿವಕುಮಾರ ಹೊಂಬಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಂತಪ್ಪ ಹಳ್ಳೂರ, ಟಿ.ಎಫ್. ನೂರ್‌ಬಾಷ, ಆರ್.ಬಿ ಅಬ್ಬಿಗೇರಿ, ದೇವಪ್ಪ ಕಾಳಿ, ಶಿವಲೀಲಾ ಹಿರೇಮಠ, ರತ್ನಾ ಸೋಂಪೂರ, ಮಂಜುಳಾ ಜೋಶಿ, ಶರಣಪ್ಪ ಸಾದರ, ಶರಣಪ್ಪ ಅಂಗಡಿ, ನಾಗರಾಜ ಹಣಸಿ, ಚಂದ್ರಯ್ಯ ಮಳ್ಳಿಮಠ, ಎ.ಬಿ.ಸಂಗನಹಾಳ, ಕೆ.ವಿ.ಹುಣಚಗೇರಿ, ಎ.ಎನ್.ಪೂಜಾರ,
ಎಸ್.ವಿ.ಲಮಾಣಿ, ಜೆ.ಎ.ಕುಂಬಾರ, ವಿರೂಪಾಕ್ಷಪ್ಪ ಹೊನ್ನಳ್ಳಿ, ನಾಗರಾಜ ಲಕ್ಷ್ಯಟ್ಟಿ, ಮಂಜುನಾಥ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net