ದೇವಸ್ಥಾನದ ಗೋಪುರಕ್ಕೆ ಅನುದಾನ ನೀಡಿ

21022023 kukanour temple gopuram fund
Published on

ಕುಕನೂರು: ಶ್ರೀ ದುರ್ಗಾದೇವಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಪಟ್ಟಣದ 7ನೇ ವಾರ್ಡ್‌ನ ಕೋಳಿಪೇಟೆ ನಿವಾಸಿಗಳು ಸಚಿವ ಹಾಲಪ್ಪ ಆಚಾರ್‌ಗೆ ಭಾನುವಾರ ಮನವಿ ಸಲ್ಲಿಸಿದರು. ಮುಖಂಡ ಈಶಪ್ಪ ಸಬರದ ಮಾತನಾಡಿ, ದುರ್ಗಾದೇವಿ ದೇವಸ್ಥಾನ, 7ನೇ ವಾರ್ಡ್ ಸೇರಿದಂತೆ ಸುತ್ತಲಿನ ಭಕ್ತರು ಆರಾಧಿಸುವ ಕೇಂದ್ರವಾಗಿದೆ. ದೇವಸ್ಥಾನ ಗೋಪುರ ನಿರ್ಮಾಣ ಮಾಡಬೇಕಿದ್ದು, ಅಗತ್ಯ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಬಸವರಾಜ ಈಬೇರಿ, ಈರಪ್ಪ ಈಬೇರಿ, ಕಳಕಪ್ಪ ಚಟ್ಟಿ, ಲಕ್ಷಣ್ ಬ್ಯಾಡರ್, ಶಿವಪ್ಪ ಬಗನಾಳ, ಚನ್ನಪ್ಪ ಸಿಲ್ಲಿ, ಉಮೇಶ ಈಬೇರಿ, ಬಸವರಾಜ ಕರಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net