ಮಳೆಗಾಗಿ ಭಾನಾಪುರದಲ್ಲಿ ಸಪ್ತ ಭಜನೆ

Sapta Bhajan for rain
ಭಾನಾಪುರ ಗ್ರಾಮಸ್ಥರು ಈಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆ ಗುರುವಾರ ನಡೆಸಿದರು. ಪ್ರಮುಖರಾದ ಶಿವಕುಮಾರ ಡಂಬಳ, ಯಲ್ಲಪ್ಪ ವಾಲಿಕಾರ, ಬಸವರಾಜ ಮೇಟಿ ಇತರರಿದ್ದರು.
Published on

ಕುಕನೂರು: ತಾಲೂಕಿನ ಭಾನಾಪುರದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಈಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆ ಗುರುವಾರ ಬೆಳಗ್ಗೆಯಿಂದ ಆರಂಭಿಸಿದರು.

ಸಪ್ತ ಭಜನೆ ದಿನದ 24 ಗಂಟೆ ನಡೆಯಲಿದೆ. ಭಜನೆ ಮಾಡುವ ಭಕ್ತರು ಮೂರು ಗಂಟೆ ನಾಲ್ಕು ಗಂಟೆಗಳ ಕಾಲ ಅಗ್ನಿ ಕುಂಡದ ಸುತ್ತ ಓಂ ನಮಃ ಶಿವಾಯ ಎನ್ನುವ ಮೂಲಕ ಭಜನೆ ಮಾಡಲಿದ್ದಾರೆ. ಇದು 7 ದಿನಗಳ ಕಾಲ ನಡೆಯಲಿದೆ. ಒಂದೂವರೆ ತಿಂಗಳಿನಿಂದ ಮಳೆ ಬಂದಿಲ್ಲ. ಹೀಗಾಗಿ ಸಪ್ತ ಭಜನೆ ಮಾಡಲಾಗುತ್ತಿದ್ದು, ಇದು ಹಿಂದಿನ ಸಂಪ್ರದಾಯವಾಗಿದ್ದು ಮುಂದುವರಿಸಲಾಗಿದೆ.

ಪ್ರಮುಖರಾದ ನಿಂಗನಗೌಡ ಡಂಬಳ, ವಿರೂಪಾಕ್ಷಯ್ಯ ಲಕಮಾಪುರ, ಶಶಿಧರಯ್ಯ ಕುಡ್ಲೇಪ್ಪನವರ, ಶರಣಪ್ಪ ಕುಂಬಾರ, ರಹಿಮಾನ್‌ಸಾಬ್ ನದಾಫ್, ನೀಲಕಂಠಯ್ಯ ಸಸಿಮಠ, ವೀರಭದ್ರಯ್ಯ ಗೊಂಡಬಾಳ, ಕಲ್ಯಾಣಪ್ಪ ಕುಂಬಾರ, ರಾಮಣ್ಣ ಕೋಮಲಾಪುರ, ಈರಣ್ಣ ಸಸಿಮಠ, ದೇವಪ್ಪ ಹಣವಾಳ, ಶರಣಯ್ಯ ಮಠದ, ಶೇಖಪ್ಪ ಕುಂಬಾರ, ವಿರೂಪಾಕ್ಷಪ್ಪ ಅಂಗಡಿ, ಶಿವಪುತ್ರಪ್ಪ ಮುದ್ಲಾಪುರ, ಕಲ್ಲಯ್ಯ ಗೊಂಡಬಾಳ, ಸಿದ್ದಯ್ಯ ಬೆಣಕಲ್‌ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net