

ಕುಕನೂರು: ತಾಲೂಕಿನ ರಾಜೂರು ಗ್ರಾಮದಲ್ಲಿ ಲಿಂ.ಪಂಚಾಕ್ಷರ ಶಿವಾಚಾರ್ಯ ಮೂರ್ತಿಯನ್ನು ಗ್ರಾಮಸ್ಥರು ಅದ್ದೂರಿಯಿಂದ ಇತ್ತೀಚೆಗೆ ಸ್ವಾಗತಿಸಿದರು.
ಸೆ.17ರಿಂದ 21ರವರೆಗೆ ಜರುಗುವ ಲಿಂ.ಪಂಚಾಕ್ಷರ ಶೀವಾಚಾರ್ಯ 5ನೇ ಪುಣ್ಯಸ್ಮರಣೋತ್ಸವ, ಅವರ ಕ್ರಿಯಾಸಮಾಧಿಯ ಶಿಲಾಮಠದ ಲೋಕಾರ್ಪಣೆ ನಿಮಿತ್ತ ಗ್ರಾಮಕ್ಕೆ ಶಿವಾಚಾರ್ಯ ಮೂರ್ತಿ ತರಲಾಯಿತು.
ಗ್ರಾಮಸ್ಥರು ಮಹಿಳೆಯರ ಕಳಶ-ಕುಂಭ ಹಾಗೂ ಭಜನಾ ಮೇಳದೊಂದಿಗೆ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡರು. ದಾರಿಯೂದ್ದಕ್ಕೂ ಶಿವಾಚಾರ್ಯರ ಜಯಘೋಷ ಮೊಳಗಿದವು. ಮೆರವಣಿಗೆಯಲ್ಲಿ ಅಭಿನವ ಶ್ರೀ ಪಂಚಾಕ್ಷರ ಶಿವಾಚಾರ್ಯರು, ರಾಜೂರು ಹಾಗೂ ಸುತ್ತಲಿನ ಗ್ರಾಮದ ಭಕ್ತರಿದ್ದರು.