ಶಾಲಾ ಛಾವಣಿ-ಮಾವು ಬೆಳೆಗೆ ಹಾನಿ

monsoon rains
ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ಅನುದಾನಿತ ತೃಪತುಂಗ ಪ್ರೌಢ ಶಾಲಾ ಕೊಠಡಿಯ ತಗಡುಗಳು ಗಾಳಿಗೆ ಹಾರಿರುವುದು.
Published on

ಕುಕನೂರು: ಪೂರ್ವ ಮುಂಗಾರು ರೇವತಿ ಮಳೆ ಪದಾರ್ಪಣೆ ಮಾಡಿದ್ದು, ಗುರುವಾರ ಸಂಜೆ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಸುರಿದಿದೆ.

ಬೆಣಕಲ್ ಗ್ರಾಮದಲ್ಲಿ ಆಲಿಕಲ್ಲು ಮಳೆ- ಬಿರುಗಾಳಿಗೆ ಅನುದಾನಿತ ನೃಪತುಂಗ ಪ್ರೌಢ ಶಾಲಾ ಕೊಠಡಿಯ ಛಾವಣಿ ತಗಡು ಹಾರಿಹೋಗಿವೆ. ಭಾನಾಪುರ, ನಿಟ್ಟಾಲಿ, ವೀರಾಪುರ, ದ್ಯಾಂಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗಾಳಿಗೆ ಮರಗಳು ನೆಲಕ್ಕೆ ಉರುಳಿವೆ.

ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಬೇಕಿದ್ದ ಮಾವು ಬೆಳೆ ನೆಲ ಕಚ್ಚಿದ್ದು, ಬೆಳೆಗಾರರಿಗೆ ದಿಕ್ಕು ತೋಚದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net