ಕಟ್ಟೆಗಳಿಗೆ ಎರೆಯೆಣ್ಣೆ ಲೇಪನ

Kukanuru Jetty Oil Coating
ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ಜನರು ಹರಟೆ ಹೊಡೆಯುವುದಕ್ಕಾಗಿ ಕಟ್ಟೆ ಮೇಲೆ ಕುಳಿತುಕೊಳ್ಳಬಾರದು ಎಂದು ಕುಕನೂರು ಠಾಣೆಯ ಪೊಲೀಸರು ಎರೆಯೆಣ್ಣೆ ಹಾಕಿದರು.
Published on

ಕುಕನೂರು: ತಾಲೂಕಿನ ಗ್ರಾಮಗಳಲ್ಲಿ ಜನರು ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯಬಾರದು ಎಂದು ಪೊಲೀಸರು ಗುರುವಾರ ಎರೆಯೆಣ್ಣೆ ಲೇಪನ ಮಾಡಿದರು. ಕರೊನಾ ನಿಯಂತ್ರಣಕ್ಕಾಗಿ ಜಾಗೃತಿ ಮೂಡಿಸಿದರೂ ಉಪಯೋಗವಿಲ್ಲದಂತಾಗಿದೆ. ಗಿಡದ ನೆರಳಿಗೆ ಹಾಗೂ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಕುಳಿತುಕೊಳ್ಳುವ ಸಾರ್ವಜನಿಕ ಸ್ಥಳಗಳಲ್ಲಿ ಎರೆಯೆಣ್ಣೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net