ಕುಕನೂರು ಪಿಡಿಒ ಸುರೇಶ ರಾಠೋಡ ವಿರುದ್ಧ ಕ್ರಮಕೈಗೊಳ್ಳಿ

Published on

ಕುಕನೂರು: ಗ್ರಾಪಂನ ಕರವಸೂಲಿ ಹಣವನ್ನು ಪಿಡಿಒ ದುರುಪಯೋಗ ಪಡಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧ್ಯಕ್ಷ ನಾಗರಾಜ ವೆಂಕಟಾಪೂರ ತಾಪಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೂ.26ರಂದು ಗ್ರಾಮದ ಪೆಟ್ರೋಲ್ ಬಂಕ್‌ನವರು ಕರವಸೂಲಿ ಹಣವನ್ನು ಗ್ರಾಪಂಗೆ ತುಂಬಿ ರಸೀದಿ ಪಡೆದಿದ್ದಾರೆ.

ಆದರೆ, ಆ ಕರವಸೂಲಿ ಹಣ ಪಿಡಿಒ ಸುರೇಶ ರಾಠೋಡ ಜು.29 ಆದರೂ ಪಂಚಾಯಿತಿ ಕರವಸೂಲಿ ಖಾತೆಗೆ ಜಮೆ ಮಾಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಕೇಳುವುದಕ್ಕೆ ನೀವ್ಯಾರು ಎಂದು ನಿಂದಿಸುತ್ತಾರೆ. ಕೂಡಲೇ ತನಿಖೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪೂರ ಇಒಗೆ ದೂರು ಕಸವಸೂಲಿ ಹಣವನ್ನು ನಾನು ಬನ್ನಿಕೊಪ್ಪ ಗ್ರಾಮದ ಚನ್ನಬಸವೇಶ್ವರ ಜಾತ್ರೆಯ ಸ್ವಚ್ಛತೆ ಖರ್ಚಿಗೆ ನೀಡಿದ್ದೇನೆ. ಇದರಿಂದ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ. ಅಧ್ಯಕ್ಷರು ಇದರ ಬಗ್ಗೆ ತಿಳಿದುಕೊಳ್ಳುತ್ತಿಲ್ಲ. ಸುರೇಶ ರಾಠೋಡ ಪಿಡಿಒ ಬನ್ನಿಕೊಪ್ಪ ಗ್ರಾಪಂ ಬನ್ನಿಕೊಪ್ಪ ಗ್ರಾಪಂಗೆ ಶನಿವಾರ ಭೇಟಿ ನೀಡಿ ತನಿಖೆ ಮಾಡಲಾಗುವುದು. ಅಧ್ಯಕ್ಷರು ಪಿಡಿಒ ವಿರುದ್ಧ ದೂರು ನೀಡಿದ್ದು, ಅದನ್ನು ಗ್ರಾಪಂಗೆ ತೆರಳಿ ತನಿಖೆ ಮಾಡಲಾಗುವುದು. ಸಂತೋಷ ಬಿರಾದಾರ ತಾಪಂ ಇಒ, ಕುಕನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net