ರಾಜಕಾರಣದಲ್ಲಿ ಬಾಬೂಜಿ ಪಾತ್ರ ಹಿರಿದು

BABUJI
ಕುಕನೂರು ತಾಲೂಕಿನ ತಳಕಲ್ ಇಂಜಿನಿಯರ್ ಕಾಲೇಜು ಆವರಣದ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ 117ನೇ ಜಯಂತಿಯಲ್ಲಿ ವಿವಿ ಕುಲಸಚಿವ ಪ್ರೋ.ಕೆ.ವಿ.ಪ್ರಸಾದ, ವಿವಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ನಿರ್ದೇಶಕ ಪ್ರೊ.ಚನ್ನಬಸವಪ್ಪ ಚಲವಾದಿ, ಇಂಗ್ಲಿಷ್ ಪ್ರಾಧ್ಯಾಪಕ ಜಡೆಪ್ಪ ಇದ್ದರು.
Published on

ಕುಕನೂರು: ಡಾ.ಬಾಬು ಜಗನಜೀವನರಾಮ್ ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿ ಎಂದು ವಿವಿ ಕುಲಸಚಿವ ಪ್ರೋ.ಕೆ.ವಿ.ಪ್ರಸಾದ ಹೇಳಿದರು.

ತಾಲೂಕಿನ ತಳಕಲ್ ಇಂಜಿನಿಯರ್ ಕಾಲೇಜು ಆವರಣದ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಬಾಬು ಜಗಜೀವನರಾಮ್ 117ನೇ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ತಳಸಮುದಾಯದ ವರ್ಗದಲ್ಲಿ ಜನಿಸಿ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಬಾಬು ಜಗಜೀವನರಾಮ್ ಅವರ ತತ್ವಾದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ರೈತರ ಮತ್ತು ಕಾರ್ಮಿಕರ ಬದುಕು ಸುಧಾರಿಸುವಲ್ಲಿ ಜಗಜೀವನರಾಮ್ ಅವರ ಶ್ರಮ ದೊಡ್ಡದು ಎಂದರು.

ವಿವಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಮತ್ತು ನಿರ್ದೇಶಕ ಪ್ರೊ.ಚನ್ನಬಸವಪ್ಪ ಚಲವಾದಿ ಮಾತನಾಡಿ, ರೈತರ ಜೀವನ ಹಸಿರು ಮಾಡಿದ ಮಹಾನ್ ನಾಯಕ ಬಾಬು ಜಗಜೀವನರಾಮ್ ಅವರು ಬಡವರ, ದೀನದಲಿತರ ಮತ್ತು ಕಾರ್ಮಿಕರ ಉದ್ಧಾರಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದರು.

ಅವರು ಸಾಮಾನ್ಯರ ಜೀವನದಲ್ಲಿ ಇಂದಿಗೂ ಮಹಾನ್ ನಾಯಕರಾಗಿ, ಹಸಿರುಕ್ರಾಂತಿಯ ಹರಿಕಾರರಾಗಿ ಖ್ಯಾತಿ ಪಡೆದಿದ್ದಾರೆ ಎಂದರು.
ಇಂಗ್ಲಿಷ್ ಪ್ರಾಧ್ಯಾಪಕ ಜಡೆಪ್ಪ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಪಾಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net