ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

MUSIC
ಕುಕನೂರಿನಲ್ಲಿ ಹಮ್ಮಿಕೊಂಡಿದ್ದ ಹಿಂದುಸ್ತಾನಿ ವಚನ ಗಾಯನ ಕಾರ್ಯಕ್ರಮವನ್ನು ಗಾಯಕ ಮಹಮ್ಮದ್ ಶರೀಫ್‌ಸಾಬ್ ಯಲಿಗಾರ ನಡೆಸಿಕೊಟ್ಟರು. ಪ್ರಮುಖರಾದ ಶರಣಯ್ಯ ಇಟಗಿ, ಮೇಘರಾಜ ಜಿಡಗಿ, ಕಸಾಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ ಇದ್ದರು.
Published on

ಕುಕನೂರು: ಪ್ರತಿಯೊಬ್ಬರು ಸಂಗೀತದ ಬಗ್ಗೆ ಆಸಕ್ತಿ ಹೊಂದುವ ಮೂಲಕ ಸಂಗೀತವನ್ನು ಆಲಿಸಬೇಕು ಎಂದು ಶ್ರೀಮಹಾದೇವ ಸ್ವಾಮೀಜಿ ಹೇಳಿದ.

ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚನ್ನಬಸವೇಶ್ವರ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘ ಬನ್ನಿಕೊಪ್ಪ ಇವರ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಿಂದುಸ್ತಾನಿ ವಚನ ಗಾಯನ ಮತ್ತು ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತವನ್ನು ಎಲ್ಲರೂ ಆಲಿಸಬೇಕು ಮತ್ತು ಇತರರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಯಲು ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಯಾಂತ್ರಿಕ ಜೀವನದಲ್ಲಿ ದುಡ್ಡು ಮಾಡುವುದೇ ದೊಡ್ಡ ಕೆಲಸವಾಗಿದೆ. ಇದರಿಂದ ನೆಮ್ಮದಿ ಇಲ್ಲವಾಗಿದೆ. ಎಲ್ಲ ಪ್ರಕಾರದ ಸಂಗೀತ ಗಾಯನದಲ್ಲಿ ಹಿಂದುಸ್ತಾನಿ ಸಂಗೀತ ವಿಭಿನ್ನ ಮತ್ತು ವಿಶೇಷ. ಇದು ಎಲ್ಲರೂ ಮೆಚ್ಚುವಂತಹ ಗಾಯನವಾಗಿದೆ ಎಂದರು.

ಹಿಂದುಸ್ತಾನಿ ವಚನ ಗಾಯನ ಮತ್ತು ಜಾನಪದ ಕಾರ್ಯಕ್ರಮವನ್ನು ಗಾಯಕ ಮಹಮ್ಮದ್ ಶರೀಫ್‌ಸಾಬ್ ಯಲಿಗಾರ ನಡೆಸಿಕೊಟ್ಟರು. ಹಂತಿಪದಗಳನ್ನು ನಾಗಯ್ಯ ವೀರುಪಾಪೂರ ಹಾಡಿದರು. ಖಾದರ್‌ಸಾಬ್ ಸಿದ್ನೇಕೊಪ್ಪ ತಬಲಾ ಸಾತ್ ನೀಡಿದರು.

ಪ್ರಮುಖರಾದ ಶರಣಯ್ಯ ಇಟಗಿ, ಮೇಘರಾಜ ಜಿಡಗಿ, ಕಸಾಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಹುಚ್ಚಿರಪ್ಪ ಕೌದಿ, ವೀರಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net