ಕೈಲಾದ ಸಹಾಯದಿಂದ ಜೀವನಕ್ಕೆ ಅರ್ಥ

mass marriage event
ಕುಕನೂರಿನ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಸಾಮೂಹಿಕ ವಿವಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಪ್ರಮುಖರಾದ ವೀರಯ್ಯ ತೋಂಟದಾರ್ಯ ಮಠ, ಬಸವರಾಜ ಮಾಸೂರು ಇತರರಿದ್ದರು.
Published on

ಕುಕನೂರು: ಡಾ.ಮಹಾದೇವ ಸ್ವಾಮೀಜಿ ಆಗಮನದಿಂದ ಶ್ರೀ ಅನ್ನದಾನೇಶ್ವರ ಶಾಖಾ ಮಠ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಅನ್ನದಾನೀಶ್ವರ ಮಹಾಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ 11 ಜೋಡಿ ಸಾಮೂಹಿಕ ವಿವಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ದಾನಿಗಳು, ಭಕ್ತರು ಹಾಗೂ ರಾಜಕಾರಣಿಗಳಿಂದ ದೇಣಿಗೆ ಸಂಗ್ರಹಿಸಿ ಇಂದು ಮಠವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿದ್ದಾರೆ. ಅವರ ಶ್ರಮದಿಂದ ಮಠ ವಿವಿಧ ಬದಲಾವಣೆಗಳನ್ನು ಕಂಡಿದೆ. ಭೂಮಿ ಮೇಲೆ ಯಾರೂ ಶಾಶ್ವತವಲ್ಲ. ಆದ್ದರಿಂದ ಇರುವಷ್ಟು ದಿನ ಕೈಲಾದ ಸಹಾಯ ಮಾಡಿದರೆ ಜೀವನಕ್ಕೆ ಅರ್ಥ ಬರುತ್ತದೆ. ಇತ್ತೀಚೆಗೆ ಜಾತಿ ವ್ಯವಸ್ಥೆಯಿಂದ ನಲುಗುತ್ತಿರುವ ಸಮಾಜದಿಂದ ಜನರು ಹೊರಬರಬೇಕು ಎಂದರು.

ಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಎಲ್ಲ ವರ್ಗದವರ ಸಹಾಯದಿಂದ ದೊಡ್ಡ ಪ್ರಮಾಣದ ರಥ ನಿರ್ಮಿಸಲು ಸಾಧ್ಯವಾಗಿದೆ. ಕಳಕಪ್ಪ ಕಂಬಳಿ ಅವರು 11 ಜೋಡಿಗಳಿಗೆ ತಾಳಿ ದೇಣಿಗೆಯಾಗಿ ನೀಡಿದ್ದು ಶ್ಲಾಘನೀಯ ಎಂದರು.

ಪ್ರಶಸ್ತಿ ಪ್ರದಾನ: ವೀರಣ್ಣ ಅಣ್ಣಿಗೇರಿಗೆ ಬಸವಶ್ರೀ ಪ್ರಶಸ್ತಿ, ನಿವೃತ್ತ ಉಪಕುಲಪತಿ ಎಚ್.ಡಿ.ಪಾಟೀಲ್‌ಗೆ ಅನ್ನದಾನೀಶ್ವರ ಪ್ರಶಸ್ತಿ, ಕೊಪ್ಪದ ನಿವೃತ್ತ ಶಿಕ್ಷಕ ಶರಣಪ್ಪಗೆ ಗುದ್ನೇಶ್ವರ ಪ್ರಶಸ್ತಿ ನೀಡಿದರೆ ನೂತನ ರಥದ ಶಿಲ್ಪಿ ಶರಣಕುಮಾರಗೆ ವಿಶ್ವಕರ್ಮ ಹಾಗೂ ರಥದ ಗಾಲಿ ಶಿಲ್ಪಿ ಕಲ್ಲಪ್ಪ ಭೋವಿ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಪ್ರಮುಖರಾದ ವೀರಯ್ಯ ತೋಂಟದಾರ್ಯಮಠ, ಗದಿದೆಪ್ಪ ಪಾವಡಶೆಟ್ಟಿ, ಈರಪ್ಪ ಮ್ಯಾಳಿ, ಈರಪ್ಪ ಗಾವರಾಳ, ಬಸವರಾಜ ಮಾಸೂರು, ಕರಬಸಯ್ಯ ಬಿನ್ನಾಳ, ಪ್ರಭು ಶಿವಶಿಂಪರ, ಶೇಖಪ್ಪ ಶಿರೂರು, ಕಾಸಿಂಸಾಬ್ ಸಂಗಟಿ, ಈರಪ್ಪ ಗುತ್ತಿ, ಚನ್ನಬಸಯ್ಯ, ಈಶಯ್ಯ ಶಿರೂರುಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net