

ಕುಕನೂರು: ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಶನಿವಾರ ಮಾಸ್ಕ್ ಧರಿಸದೆ ವಾಹನ ಚಲಾಯಿಸುತ್ತಿದ್ದವರಿಗೆ ಪಿಎಸ್‌ಐ ಎನ್.ವೆಂಕಟೇಶ ದಂಡ ವಿಧಿಸಿ ಮಾಸ್ಕ್ ಹಾಕಿ ಕಳುಹಿಸಿದರು. ಬಸ್‌ಗಳನ್ನು ತಡೆದು ಮಾಸ್ಕ್ ಧರಿಸದಿದ್ದ ಪ್ರಯಾಣಿಕರಿಗೂ ದಂಡ ಹಾಕಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಪಿಎಸ್‌ಐ ಎಚ್ಚರಿಸಿದರು. ಎಎಸ್‌ಐಗಳಾದ ಮುರಾರಿ, ಪ್ರಭುರಾಜ, ಸಿಬ್ಬಂದಿ ಬಸವರೆಡ್ಡಿ ಇಟಗಿ ಮತ್ತು ಇತರರಿದ್ದರು.