ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

101220 Kukanuru Land Reform Act
ಕುಕನೂರಿನಲ್ಲಿ ಶಿರಸ್ತೇದಾರ ಮಹಮ್ಮದ್ ಮುಸ್ತಾಫ್‌ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಿ. ಆರ್ ನಾರಾಯಣರಡ್ಡಿ ಬಣದ) ತಾಲೂಕು ಘಟಕ ಹಾಗೂ ಹಮಾಲರ ಸಂಘದ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.
Published on

ಕುಕನೂರು: ಭೂ ಸುಧಾರಣಾ ಕಾಯ್ದೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ತಿದ್ದುಪಡಿಯನ್ನು ವಿರೋಧಿಸಿ, ಕೂಡಲೇ ಹಿಂಪಡೆಯಬೇಕೆಂದು ಪ್ರತಿಭಟಿಸಿ ಶಿರಸ್ತೇದಾರ ಮಹಮ್ಮದ್ ಮುಸ್ತಾಫ್‌ಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಿ.ಆರ್.ನಾರಾಯಣರಡ್ಡಿ ಬಣ) ತಾಲೂಕು ಘಟಕ ಹಾಗೂ ಹಮಾಲರ ಸಂಘದ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಅನ್ನ ನೀಡುವ ರೈತನ ಬದುಕು ಬೀದಿಗೆ ಬೀಳುವಂತಾಗಿದೆ. ರೈತರಿಗೆ ಇದು ಮಾರಕವಾಗಿದೆ. ರೈತರ ಜಮೀನನ್ನು ಯಾರು ಬೇಕಾದರು ಖರೀದಿಸಬಹುದೆಂಬ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರ, ಕುಕನೂರ ತಾಲೂಕು ರೈತ ಸಂಘದ ಅಧ್ಯಕ್ಷ ಅಂದಪ್ಪ ಹುರಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಡ್ಲಿ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಪದಾಧಿಕಾರಿಗಳಾದ ಮಹೇಶಪ್ಪ ಬೆದವಟ್ಟಿ, ಶಿವಪ್ಪ ಸಂಧಿಮನಿ, ಭರಮಪ್ಪ ತಳವಾರ, ಹುಚ್ಚೀರಪ್ಪ ಕೌದಿ, ಶಿವಪ್ಪ ಯಡ್ಡೋಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net