ಅಧಿಕಾರಿಗಳಿಂದ ಗಡಿಭಾಗ ಗುರುತಿಸುವ ಕಾರ್ಯ

Kukanour Gudneshwara Math serve
ಕುಕನೂರಿನ ಗುದ್ನೇಶ್ವರ ಮಠದ ಶ್ರೀರುದ್ರಮುನೀಶ್ವರ ದೇವಾಲಯದ ವಿವಾದಿತ ಜಾಗದ ಗಡಿ ಭಾಗದ ಸರ್ವೆ ಕಾರ್ಯವನ್ನು ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ ಇದ್ದರು.
Published on

ಕುಕನೂರು, ಐತಿಹಾಸಿಕ ದೇವಾಲಯ, ಗುದ್ನೇಶ್ವರ ಮಠ, ವಿವಾದಿತ ಜಾಗದ ಗಡಿ ಭಾಗ ಸರ್ವೇ,

Kukanur, historical temple, Gudneshwara Math, boundary survey of disputed land,

ಕುಕನೂರು : ಪಟ್ಟಣದ ಐತಿಹಾಸಿಕ ದೇವಾಲಯ ಗುದ್ನೇಶ್ವರ ಮಠದ ರುದ್ರಮುನೀಶ್ವರ ದೇವಾಲಯದ ವಿವಾದಿತ ಜಾಗದ ಗಡಿ ಭಾಗದ ಸರ್ವೇ ಕಾರ್ಯವನ್ನು ಪೊಲೀಸ್ ಸರ್ಪಗಾವಲಿನೊಂದಿಗೆ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು.

ದೇವಸ್ಥಾನಕ್ಕೆ ಸೇರಿದ ಜಮೀನಿಗೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಸರ್ವೇ ಕಾರ್ಯ ನಡೆದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಮತ್ತು ದೇವಸ್ಥಾನದ ಸೇವಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಎಸಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿ, ಈಗ ನಡೆಯುತ್ತಿರುವ ಸರ್ವೇ ಕಾರ್ಯಕ್ಕೆ ಸರ್ವೇ ನಂ.78ರ ಸರ್ವೆ ಜಮೀನಿಗೂ ಸಂಬಂಧವಿಲ್ಲ. ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಸರ್ವೇ ಮಾಡಲು ಹಾಗೂ ಕಾಮಗಾರಿ ನಡೆಸಲು ನಿರ್ಬಂಧವಿದೆ. ಇದು ಸಾಮಾನ್ಯ ಮಾಹಿತಿ ವೀಕ್ಷಣೆಯಾಗಿದ್ದು, ಸರ್ಕಾರಿ ಜಮೀನುಗಳಿಗೆ ಸಂಬಂಧಪಟ್ಟಂತೆ ಗಡಿ ಭಾಗದ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ ಹಾಗೂ ಸರ್ವೇ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net