ಗೌರವ-ಭಯದಿಂದ ಉನ್ನತಿ ಸಾಧ್ಯ

KKNR-02
ಕುಕನೂರಿನ ಶ್ರೀ ಗವಿಸಿದ್ದೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 2001-02ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶಿಕ್ಷಕ ಜಿ.ಎಂ.ಹೊಸ್ಮನಿ ಉದ್ಘಾಟಿಸಿದರು. ನಿವೃತ್ತ ಮುಖ್ಯಶಿಕ್ಷಕ ಡಾ. ಕೆ.ಬಿ.ಬ್ಯಾಳಿ, ಶಿಕ್ಷಕರಾದ ವಿ.ಕೆ.ಬಂಡಿವಡ್ಡರ್, ಎಂ.ಕೆ.ತುಪ್ಪದ, ಎಸ್.ಎಂ.ಹಿರೇಮಠ, ಆರ್.ಟಿ.ಬಾಕಳೆ ಇತರರಿದ್ದರು.
Published on

ಕುಕನೂರು: ಈ ಹಿಂದೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ಹಾಗೂ ಕಠಿಣ ಅಭ್ಯಾಸಕ್ಕೆ ಆದ್ಯತೆ ನೀಡಿದ್ದರಿಂದ ಇಂದು ನಾವು ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವಾಗಿದೆ ಎಂದು ಶಿಕ್ಷಕ ಜಿ.ಎಂ.ಹೊಸ್ಮನಿ ಹೇಳಿದರು.

ಪಟ್ಟಣದಲ್ಲಿ ಶ್ರೀ ಗವಿಸಿದ್ದೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 2001-02ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಶಿಕ್ಷಕರನ್ನು ಕಂಡರೇ ವಿದ್ಯಾರ್ಥಿಗಳಿಗೆ ಗೌರವದ ಜತೆ ಭಯವು ಇತ್ತು. ಆ ಭಯ ಮತ್ತು ಗೌರವ ಇಂದು ಎಲ್ಲ ವಿದ್ಯಾರ್ಥಿಗಳ ಉನ್ನತಿಗೆ ಕಾರಣವಾಗಿರುವುದು ಸಂತಸದ ವಿಷಯ ಎಂದರು.

ನಿವೃತ್ತ ಶಿಕ್ಷಕಿ ಬಸವಣ್ಣೆಮ್ಮ ಅರಳಲೆಮಠ ಮಾತನಾಡಿ, ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ವ್ಯಕ್ತಿಗಳಾಗಿ ನಮಗೆ ಗುರುವಂದನೆ ಸಲ್ಲಿಸುತ್ತಿರುವುದು ಆನಂದ ತಂದಿದೆ. ವಿದ್ಯಾರ್ಥಿ ಬಳಗ ಇನ್ನೂ ಉತ್ತುಂಗಕ್ಕೆ ಬೆಳೆಯಲಿ ಎಂದರು.

ಪ್ರೌಢಶಾಲೆ ನಿವೃತ್ತ ಶಿಕ್ಷಕ ಆರ್.ಟಿ ಬಾಕಳೆ ಮಾತನಾಡಿ, ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠ. ನನ್ನ ವೃತ್ತಿಬಗ್ಗೆ ನನಗೆ ಹೆಮ್ಮೆ ಇದೆ. ಜತೆಗೆ ಶಿಷ್ಯರು ಉತ್ತಮ ಸ್ಥಾನ ತಲುಪಿ ನಮಗೆ ಗುರುವಂದನೆ ಮೂಲಕ ಗೌರವ ಸಮರ್ಪಿಸಿರುವುದು ಖುಷಿ ನೀಡಿದೆ.

ನಿಮ್ಮೆಲ್ಲರ ಜೀವನ ಸುಖವಾಗಿರಲಿ ಎಂದು ಆಶಿಸಿದರು. ಹಳೇ ವಿದ್ಯಾರ್ಥಿಗಳಾದ ನಿರ್ಮಲಾ ಹಟ್ಟಿ, ಗಿರಿಜಾ, ವಿಜಯೇಂದ್ರ ಶಹಪೂರ, ಮಂಜುನಾಥ ಗುತ್ತಿ, ಮಂಜುನಾಥ ಮನ್ನಾಪೂರ, ಗವಿಸಿದ್ದಪ್ಪ ಕವಲೂರು, ಉದಯ ಕೂಡ್ಲಿಗಿ ಸೇರಿ ಮಾತನಾಡಿದರು.

ನಿವೃತ್ತ ಮುಖ್ಯಶಿಕ್ಷಕ ಡಾ.ಕೆ.ಬಿ.ಬ್ಯಾಳಿ, ಶಿಕ್ಷಕರಾದ ವಿ.ಕೆ.ಬಂಡಿವಡ್ಡರ್, ಎಂ.ಕೆ.ತುಪ್ಪದ, ಎಸ್.ಎಂ.ಹಿರೇಮಠ, ಆರ್.ಟಿ.ಬಾಕಳೆ, ಅಕ್ಕಮಹಾದೇವಿ ಕರಡಿ, ಅನ್ನಪೂರ್ಣ ತಿಪ್ಪಶೆಟ್ಟಿ, ರುದ್ರಪ್ಪ ಶಿರೂರು, ಶಿವಪ್ಪ ಇಬೇರಿ, ಆರ್.ಬಿ.ತಳವಾರ, ನಾಗರಾಜ ಕುಕನೂರು, ವಿ.ಬಿ.ಕಟ್ಟಿ, ಎಸ್.ಜೆ.ಪಾಟೀಲ್, ರಾಮಣ್ಣ ಹಳ್ಳಿಕೇರಿ, ಗುದ್ನೆಪ್ಪ ಮನ್ನಾಪೂರ, ಶಾಲಾ ಸಿಬ್ಬಂದಿ ಮೃತ್ಯುಂಜಯ ಹಿರೆಮಠ, ಪಿ.ವಿ.ಸುಳಿಭಾವಿ, ಶಿವಪ್ಪ ಈಬೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net