ಆದರ್ಶ ವಿದ್ಯಾಲಯ ಉನ್ನತೀಕರಣ

Post Creation
ಕುಕನೂರು ತಾಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯ.
Published on

ಕುಕನೂರು: ತಾಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯ ಪದವಿ ಪೂರ್ವ ಕಾಲೇಜಾಗಿ ಉನ್ನತೀಕರಣಗೊಂಡಿದ್ದು, ಇದಕ್ಕೆ ಬೇಕಾದ ಅನುದಾನ ಮತ್ತು ಉಪನ್ಯಾಸಕ ನೇಮಕಕ್ಕೆ ಅನುದಾನ ಮಂಜೂರು ಮಾಡಲಾಗಿದೆ.

ಶಾಸಕ ಬಸವರಾಜ ರಾಯರಡ್ಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಆದರ್ಶ ವಿದ್ಯಾಲಯ ಪಿಯು ಕಾಲೇಜಾಗಿ ಉನ್ನತೀಕರಣಗೊಂಡಿದ್ದು, ಪಿಯುಸಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಆರಂಭ, ಮೂಲ ಸೌಕರ್ಯ ಮತ್ತು ಉಪನ್ಯಾಸಕರ ನೇಮಕಕ್ಕೆ ಮಂಜೂರಾತಿ ದೊರೆತಿದೆ.

ಇಟಗಿ ಆದರ್ಶ ಶಾಲೆ 6ನೇ ತರಗತಿಯಿಂದ 10ತರಗತಿವರೆಗೆ ಇದೆ. 451 ವಿದ್ಯಾರ್ಥಿಗಳಿದ್ದಾರೆ. ಒಂದು ತರಗತಿಗೆ 120 ವಿದ್ಯಾರ್ಥಿಗಳಿದ್ದಾರೆ. 10ನೇ ತರಗತಿ ನಂತರ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಸ್ಥಳಕ್ಕೆ ಹೋಗಬೇಕಿತ್ತು. ವಿದ್ಯಾಲಯ ಉನ್ನತತೀಕರಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಗ್ರಾಮೀಣ ಪ್ರದೇಶದ ಮಕ್ಕಳು ಪಿಯುಸಿ ವ್ಯಾಸಂಗಕ್ಕೆ 10ನೇ ತರಗತಿ ನಂತರ ಬೇರೆ ಕಡೆ ಹೋಗಬಾರದು. ಸ್ಥಳೀಯವಾಗಿಯೇ ಅವರಿಗೆ ಪಿಯುಸಿ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಆದರ್ಶ ವಿದ್ಯಾಲಯವನ್ನು ಕಾಲೇಜಾಗಿ ಉನ್ನತೀಕರಿಸಿ ಅಗತ್ಯ ಹುದ್ದೆ, ಬೇಕಾದ ಅನುದಾನ ಮಂಜೂರು ಮಾಡಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಬಸವರಾಜ ರಾಯರಡ್ಡಿ

ಸಿಎಂ ಆರ್ಥಿಕ ಸಲಹೆಗಾರ

10ನೇ ತರಗತಿ ನಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದೂರದೂರಿಗೆ ಹೋಗಿ ಪಿಯು ಶಿಕ್ಷಣ ಪಡೆಯಬೇಕಿತ್ತು. ಪಿಯು ಕಾಲೇಜು ಮಂಜೂರಾತಿಯಿಂದ ಕಡಿಮೆ ಖರ್ಚಿನಲ್ಲಿ ಪಿಯು ಶಿಕ್ಷಣ ಪಡೆಯಲು ಅನುಕೂಲವಾಗಲಿದೆ.

ರಾಮರಡ್ಡೆಪ್ಪ

ಆದರ್ಶ ವಿದ್ಯಾಲಯ ಪ್ರಾಚಾರ್ಯ, ಇಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net