ಗಡಿ ರಕ್ಷಣೆಗೆ ಪ್ರಧಾನಿ ಪಣ

Untitled design
ಮಸಬಹಂಚಿನಾಳ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು. ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಚಂದ್ರಶೇಖರ ಹಲಗೇರಿ, ಮಹೇಶ ಇದ್ದರು.
Published on

ಕುಕನೂರು; ಭಾರತ ಸ್ವಾವಲಂಬಿ, ಸ್ವಾಭಿಮಾನದಿಂದ ಸದೃಢವಾಗುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಸ್ವಾಭಿಮಾನದಲ್ಲಿ ವಿಶ್ವಗುರು ಸ್ಥಾನಕ್ಕೆ ಏರಿಸಿದ್ದಾರೆ. ಆತ್ಮನಿರ್ಭರ ಭಾರತ ಮೂಲಕ ಸದೃಢವನ್ನಾಗಿಸಿದ್ದಾರೆ. ಕರೊನಾ ವೇಳೆಯಲ್ಲಿ ವಿದೇಶಗಳು ಔಷಧಿಯಿಲ್ಲದೆ ಭಾರತದಲ್ಲಿ ಹೆಣಗಳ ರಾಶಿ ಉರುಳುತ್ತದೆ ಎಂದಿದ್ದರು. ಮೋದಿ ಅವರು ಭಾರತದಲ್ಲಿಯೇ ಔಷಧಿ ತಯಾರಿಸಿ 144 ಕೋಟಿ ಜನರ ಜೀವ ಉಳಿಸಿದರು. ಭಾರತದ ಗಡಿ ರಕ್ಷಣೆಗೆ ಪಣತೊಟ್ಟು ಅಗತ್ಯ ಶಸ್ತ್ರ, ಯುದ್ಧ ವಿಮಾನಗಳನ್ನು ಸಹ ಇಲ್ಲಿಯೇ ತಯಾರಿಸಲು ಕ್ರಮವಹಿಸಿದರು. ಈ ದಿಸೆಯಲ್ಲಿ ಆತ್ಮನಿರ್ಭರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಚಂದ್ರಶೇಖರ ಹಲಗೇರಿ, ಮಹೇಶ, ಮಂಜುನಾಥ ನಾಡಗೌಡ್ರು, ವಿಶ್ವನಾಥ ಮರಿಬಸಪ್ಪನವರ, ಕಲ್ಲಪ್ಪ ಕರಮುಡಿ, ಅಂಬರೀಶ ಹುಬ್ಬಳ್ಳಿ, ಹಂಚ್ಯಾಳಪ್ಪ ತಳವಾರ, ಅಯ್ಯನಗೌಡ ಕೆಂಚಮ್ಮನವರ, ಶಂಭು ಜೋಳದ, ಶ್ರೀನಿವಾಸ ತಿಮ್ಮಾಪುರ, ನೇತ್ರಾ ಹಿರೇಮಠ, ಪಾರ್ವತಿ ಹಣಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net