ಸ್ವದೇಶಿ ಕಂಪನಿಗಳು ಮುಂದೆ ಬರಲಿ, ಧರ್ಮಸ್ಥಳ ಸಂಘದ ನಿರ್ದೇಶಕ ಪ್ರಕಾಶರಾವ್ ಆಶಯ

Kit Distribution Program
ಕುಕನೂರು ಶ್ರೀ ಅನ್ನದಾನೇಶ್ವರ ಮಠದಲ್ಲಿ ಆಯೋಜಿಸಿದ್ದ ಕಿಟ್ ವಿತರಣೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ನಿರ್ದೇಶಕ ಪ್ರಕಾಶರಾವ್ ಮಂಗಳವಾರ ಉದ್ಘಾಟಿಸಿದರು. ಡಾ.ಮಹಾದೇವ ದೇವರು, ಗುತ್ತಿಗೆದಾರ ಪ್ರಭು ಹೊಸಅಂಗಡಿ ಇತರರಿದ್ದರು.
Published on

ಕುಕನೂರು: ಭಾರತದಲ್ಲಿ ವಿದೇಶಿ ಕಂಪನಿಗಳ ವಸ್ತುಗಳ ಮಾರಾಟವೇ ಹೆಚ್ಚಾಗಿದ್ದು, ಸ್ವದೇಶಿ ಕಂಪನಿಗಳು ಕೂಡ ಉದ್ಯಮದಲ್ಲಿ ಮುಂದೆ ಬರಬೇಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಪ್ರಕಾಶರಾವ್ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಬಡವರಿಗೆ, ಶ್ರಮಿಕ ವರ್ಗದವರಿಗೆ ಅನುಕೂಲ ಕಲ್ಪಿಸಿದೆ. ಶಾಲೆಯಲ್ಲಿ ಸಾವಿರ ಶಿಕ್ಷಕರನ್ನು ನಿಯೋಜಿಸಿ, ಅವರಿಗೆ ವೇತನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ವರವಾಗಿದೆ ಎಂದರು.

ಡಾ.ಮಹಾದೇವ ದೇವರು ಮಾತನಾಡಿ, ಸಮಾಜವನ್ನು ತಿದ್ದಿ ತೀಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖ. ಆದರೆ, ಅವರು ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಜೀವನ ಭದ್ರತೆ ಇಲ್ಲವಾಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ನಾಗರಾಜ ಬೆಣಕಲ್, ಸಂಘದ ಮೇಲ್ವಿಚಾರಕ ಶ್ರೀಶೈಲ, ಯಲಬುರ್ಗಾ ತಾಲೂಕಿನ ಯೋಜನಾಧಿಕಾರಿ ಸತೀಶ್ ಗವಂಕಾರ, ಗುತ್ತಿಗೆದಾರ ಪ್ರಭು ಹೊಸಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net