ಡಾ.ಮಹಾದೇವ ಶ್ರೀಗಳಿಂದ ಸಾಮಾಜಿಕ ಕಾರ್ಯ

Untitled design(21)
Published on

ಕುಕನೂರು: ಬಡವರ ಅಭಿವೃದ್ಧಿಗೆ ಡಾ.ಮಹಾದೇವ ಸ್ವಾಮೀಜಿ ಕೊಡುಗೆ ಅಪಾರವಾಗಿದ್ದು, ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಅನ್ನದಾನೇಶ್ವರಮಠದಲ್ಲಿ ಅನ್ನದಾನೇಶ್ವರ ಧರ್ಮ ಸಂಸ್ಕೃತಿ ಪ್ರಸಾರ ಸಂಸ್ಥೆಯಿಂದ ಡಾ.ಮಹಾದೇವ ಸ್ವಾಮೀಜಿ ಅವರ ದ್ವಿತೀಯ ವರ್ಷದ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಉಚಿತ ಸಾಮೂಹಿಕ ವಿವಾಹಗಳು ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಶ್ರೀಮಠಕ್ಕೆ ಸ್ವಾಮೀಜಿ ಅವರು ಬಂದ ಮೇಲೆ ಸಾಕಷ್ಟು ಅಭಿವೃದ್ಧಿಗೊಂಡಿದೆ. ಸದಾ ಕ್ರೀಯಾಶೀಲರಾಗಿರುವ ಅವರು ಬಡವರು, ದುರ್ಬಲರು ಸೇರಿ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹೊಸದಾಗಿ ಉಚಿತ ಅಂಗವಿಕಲರ ವಿವಾಹ ಹಾಗೂ ಅಂತರಜಾತಿಗಳ ವಿವಾಹವನ್ನು ಹಮ್ಮಿಕೊಂಡಿದ್ದಾರೆ. ಇಂತಹ ಸ್ವಾಮೀಜಿಗಳಿಂದ ಮಠಗಳು ಇನ್ನಷ್ಟೂ ಎತ್ತರಕ್ಕೆ ಬೆಳೆಯುತ್ತವೆ ಎಂದರು.

ಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಇಂತಹ ದೊಡ್ಡಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾದರೆ ಸುತ್ತಮುತ್ತಲಿನ 62ಕ್ಕೂ ಹೆಚ್ಚು ಗ್ರಾಮಸ್ಥರ ಸಹಾಯ ಸಹಕಾರವನ್ನು ನೀಡಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡುವ ಮನಸ್ಸು ಇರಬೇಕು ಎಂದರು.

ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ, ಇಟಗಿಯ ಶಿವಶರಣ ಗದಿಗೆಪ್ಪಜ್ಜನವರ, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಪ್ರಮುಖರಾದ ಅಂದಪ್ಪ ಜವಳಿ, ವೀರಣ್ಣ ಅಣ್ಣಿಗೇರಿ, ಜಂಬಣ್ಣ ಅಂಗಡಿ, ಎಂ.ಬಿ.ಅಳವಂಡಿ, ಈರಣ್ಣ ಯಲಬುರ್ಗಿ, ಈರಪ್ಪ ಕರೆಕುರಿ, ರಶೀದ್‌ಸಾಬ ಹಣಜಗಿರಿ, ಶಿವಕುಮಾರ ನಾಗಲಾಪೂರಮಠ, ವೀರಯ್ಯ ತೊಂಟದಾರ್ಯಮಠ, ಹನುಮಯ್ಯ ಹಂಪನಾಳ, ದೇವಪ್ಪ ಸೋಭಾನದ, ಅಬ್ದುಲ್‌ಸಾಬ ತಳಕಲ್, ನಿಂಗಪ್ಪ ಗೊರ್ಲೆಕೊಪ್ಪ, ರಾಜೇಂದ್ರಗೌಡ ಪೋ,ಪಾಟೀಲ್, ಭರಮಪ್ಪ ತಳವಾರ, ರಾಮಣ್ಣ ಹೊಸಮನಿ, ಗದಿಗೆಪ್ಪ ಪವಾಡ್‌ಶೆಟ್ಟರ್, ಲಕ್ಷ್ಮಣ ಕಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net