ಬೆಳೆವಿಮೆ ತಾರತಮ್ಯ ಸರಿಪಡಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮನವಿ

12012021 Kukanur Formars insist
Published on

ಕುಕನೂರು: ಮುಂಗಾರು ಹಾಗೂ ಹಿಂಗಾರು ಬೆಳೆವಿಮೆ ಮಂಜೂರಿನಲ್ಲಾದ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಪ್ರೊ.ನಂಜುಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಶಿರಸ್ತೇದಾರ ಮಂಗಳವಾರ ರವಿಕುಮಾರಗೆ ಮನವಿ ಸಲ್ಲಿಸಿದರು.

2019-2020ನೇ ಸಾಲಿನ ಮುಂಗಾರು ಬೆಳೆವಿಮೆ ಮಂಜೂರು ಆಗಿದ್ದು, ಬೆಳೆವಿಮೆ ಸರ್ವೇದಾರರ ತಂಡ ಬೆಳೆ ಸಮೀಕ್ಷೆಯಲ್ಲಿ ಎಡವಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷದ ಕಡಲೆ ಬೆಳೆ ಸಹ ರೈತರಿಗೆ ದಕ್ಕಿಲ್ಲ. ಕಡಲೆ ಬೆಳೆವಿಮೆ ಮಂಜೂರು ಮಾಡದೆ ವಿಮೆ ಕಂಪನಿಯವರು ತಾರತಮ್ಯ ಮಾಡುತ್ತಿದ್ದಾರೆ. ಸ್ಥಳೀಯವಾಗಿ ತಾವೇ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ರೈತರಿಗೆ ಆಗುವ ಅನ್ಯಾಯ ಸರಿಪಡಿಸಬೇಕು. ಮುಂಗಾರಿನ ಹೆಸರು ಹಾಗೂ ಹಿಂಗಾರಿನ ಕಡಲೆ ಬೆಳೆ ವಿಮೆ ಮಂಜೂರು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ರೈತರಾದ ಪತ್ರೆಪ್ಪ ವೀರಾಪುರ, ಭರಮಗೌಡ ಮಾಲಿಪಾಟೀಲ, ಬಸವನಗೌಡ ಮಾಲಿಪಾಟೀಲ್, ಶಿವಶರಣಗೌಡ, ಕೆಂಚಪ್ಪ ಅಗಸಿನಮನಿ, ವೀರಪ್ಪ ಗುರಿಕಾರ, ಶಿವಣ್ಣ ಕಡೆಮನಿ, ದೇವಪ್ಪ ಗುಡಮಿ, ಕನಕಪ್ಪ ಪೂಜಾರ, ಅಂದಪ್ಪ ಹುರಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net