

ಕುಕನೂರು: ಪಟ್ಟಣದ ಅಂಬೇಡ್ಕರ್ ಭವನ, ಬಾಲ ಭವನ ಮತ್ತು ಶಾದಿಮಹಲ್ ಕಾಮಗಾರಿಗೆ ಶೀಘ್ರ ಅನುದಾನ ನೀಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದಲ್ಲಿ ಅರ್ಧಕ್ಕೆ ನಿಂತ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಬುಧವಾರ ಮಾತನಾಡಿದರು. ಪ್ರಗತಿಯಲ್ಲಿರುವ ಕಾಮಗಾರಿಗಳು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ್ ಗುಡಿಹಿಂದಲ್, ಸದಸ್ಯರಾದ ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಮಂಜುನಾಥ ಕೋಳೂರು, ಸಿಡಿಪಿಒ ಬೆಟದಪ್ಪ ಮಾಳೇಕೊಪ್ಪ, ಜೆಇ ಶಿವಕುಮಾರ, ಪ್ರಮುಖರಾದ ವೀರಯ್ಯ ದಳಪತಿ, ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಯಲ್ಲಪ್ಪ ಕಲ್ಮನಿ, ಪರಶುರಾಮ ಸಕ್ರಣ್ಣವರ್ ಇತರರಿದ್ದರು.