ಚುಟುಕು ಸಾಹಿತ್ಯದಲ್ಲಿದೆ ಕಳಕಳಿ

Kukanour chutuku sahitya parishath
ಕುಕನೂರಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಚುಟುಕು ಗೋಷ್ಠಿ ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿದರು. ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಹೇಶ್ ಸಬರದ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ್ ಉಪ್ಪಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ನೇಲಾಗಣಿ , ಹಿರಿಯ ಸಾಹಿತಿ ಆರ್.ಪಿ.ರಾಜೂರು ಇತರರಿದ್ದರು.
Published on

ಕುಕನೂರು: ತಾಲೂಕಿನಲ್ಲಿ ಚುಟುಕು ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೊಬಗಿನಲ್ಲಿ ಕಲ್ಯಾಣ ಚಾಲುಕ್ಯರ ನಾಡು ಕುಂತಳಪುರ ವೈಭವ ಕಾಣುತ್ತಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.

ಪಟ್ಟಣದ ಇಟಗಿ ಭೀಮಾಂಬಿಕಾ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಚುಟುಕು ಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದ ಕುರಿತು ಸಾಕಷ್ಟು ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಕಳೆದ ಮೂರು ದಶಕಗಳಿಂದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಡಾ.ಎಂ.ಜಿ.ಆರ್ ಅರಸು ನೇತೃತ್ವದಲ್ಲಿ ವಿಭಿನ್ನವಾದ ಸೇವೆ ಮಾಡುತ್ತಿದೆ. ಚುಟುಕು ಸಾಹಿತ್ಯ ಪರಂಪರೆ, ಕಾವ್ಯ, ಕೃತಿಗಳ ಮೂಲಕ ಸಾಹಿತ್ಯ ವಾತಾವರಣ ನಿರ್ಮಿಸಿ ಶ್ರೀಮಂತಗೊಂಡಿದೆ. ಚುಟುಕು ಸಾಹಿತ್ಯದಲ್ಲಿ ಹಾಸ್ಯ, ಬದುಕಿನ ವಿಡಂಬನೆ, ವಿಪರ್ಯಾಸಗಳ ಬಣ್ಣನೆ ಮೂಲಕ ಸಾಮಾಜಿಕ ಕಳಕಳಿ, ಜವಾಬ್ದಾರಿಯನ್ನು ವಿವರಿಸುತ್ತಾರೆ. ಹೃದಯ ದಹಿಸುವ ಅನೇಕ ಸತ್ಯಗಳನ್ನು ಕೇವಲ ನಾಲ್ಕು ಸಾಲಿನಲ್ಲಿ ಕಟ್ಟಿಕೊಡಲಾಗುತ್ತಿದೆ. ಇದು ಗಟ್ಟಿತನದ ಸಾಹಿತ್ಯ ಎಂದರು.

ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಹೇಶ್ ಸಬರದ್ ಮಾತನಾಡಿ, ತಾಲೂಕಿನ ಅನೇಕ ಪ್ರತಿಭೆಗಳು ಚುಟುಕು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಬಿಡುವಿಲ್ಲದ ಜೀವನ ಶೈಲಿಗೆ ಚುಟುಕು ಸಾಹಿತ್ಯ ಸಹಕಾರಿಯಾಗಿದೆ. ನಾಲ್ಕು ಸಾಲಿನಲ್ಲೇ ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ ಎಂದು ತಿಳಿಸಿದರು.

ಕಲಾವಿದ ಮುರಾರಿ ಬಜೇಂತ್ರಿ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು. ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ್ ಉಪ್ಪಿನ್, ಜಿಲ್ಲಾ ಪ್ರ.ಕಾರ್ಯದರ್ಶಿ ಮಹಾಂತೇಶ್ ನೇಲಾಗಣಿ, ಹಿರಿಯ ಸಾಹಿತಿ ಆರ್.ಪಿ.ರಾಜೂರು, ಪ್ರಮುಖರಾದ ಶರಣಪ್ಪ ರಾವಣಕಿ, ಶರಣಪ್ಪ ಕೊಪ್ಪದ್, ಉಮೇಶ ಕಂಬಳಿ, ಶಂಭು ಅರಿಶಿನದ, ಮಾರುತಿ ತಳವಾರ, ಅಕ್ಕಮ್ಮ ಅಂಗಡಿ, ಈರಯ್ಯ ಕುರ್ತಕೋಟಿ, ಕಲ್ಲಪ್ಪ ಕವಳಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net