ವಾರ್ಡ್‌ಗಳ ಸಮಸ್ಯೆ ನಿವಾರಣೆಗೆ ಕ್ರಮ

MEETING
ಕುಕನೂರು ಪ್ರವಾಸಿ ಮಂದಿರದಲ್ಲಿ ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು. ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಜೆಸ್ಕಾಂ ಎಇಇ ಎಂ.ನಾಗರಾಜ ಇತರರಿದ್ದರು.
Published on

ಕುಕನೂರು: ಹಿಂದಿನ ಸಭೆಯಲ್ಲಿ ಚರ್ಚೆಯಾದ ಯಾವ ಅಭಿವೃದ್ಧಿ ಕಾಮಗಾರಿಯೂ ಕಾರ್ಯರೂಪಕ್ಕೆ ಬಂದಿಲ್ಲವೆಂದು ಪಪಂ ಸದಸ್ಯರು ದೂರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಹಿಂದಿನ ಸಭೆಯಲ್ಲಿ ಚರ್ಚಿಸಿದ ಕೆಲ ಕಾಮಗಾರಿಗಳು ಜಾರಿಗೆ ಬಂದಿಲ್ಲ. ಇದಲ್ಲದೆ ಕೆಲವು ವಾರ್ಡ್‌ಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಶೌಚಗೃಹ ಸೇರಿ ಅನೇಕ ಸಮಸ್ಯೆಗಳಿವೆ ಎಂದು ದೂರಿದರು.

ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದ ಹಿಂದಿನ ಸಭೆಯಲ್ಲಿ ಚರ್ಚೆಯಾದ ಕೆಲಸ ನಡೆದಿಲ್ಲ. ಈ ಬಾರಿ ಎಲ್ಲ ವಾರ್ಡ್‌ಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸಲಾಗುವುದು ಎಂದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ, ಹೊಸದಾಗಿ ಕೊರೆಯಿಸಿದ ಬೋರ್‌ವೆಲ್‌ಗಳಿಗೆ ತ್ರಿಫೇಸ್ ವಿದ್ಯುತ್ ಅಳವಡಿಕೆ, ಅಂಬೇಡ್ಕರ್ ಸಮುದಾಯ ಭವನಕ್ಕೆ ಕಾಂಪೌಂಡ್ ಕಾಮಗಾರಿಗೆ ಅನುಮೋದನೆ, 10ನೇ ವಾರ್ಡ್‌ನ ಆರ್‌ಒ ಘಟಕ ನಿರ್ವಹಣೆ ಗುದ್ನೇಪ್ಪನಮಠದ ಕಮಿಟಿಗೆ ನೀಡುವುದು, ಬಸವೇಶ್ವರ ವಾಣಿಜ್ಯ ಮಳಿಗೆ ಕಾಮಗಾರಿ, ಸಿ.ಎ ನಿವೇಶನಗಳ ಮಂಜೂರಾತಿ, ಬಸವೇಶ್ವರ ನಗರ ಮತ್ತು ಸಂಜಯನಗರ ಪಾರ್ಕ್ ಜಾಗ ಅತಿಕ್ರಮಣ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಜೆಸ್ಕಾಂ ಎಇಇ ಎಂ.ನಾಗರಾಜ, ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ಸಿರಾಜ ಕರಮುಡಿ, ಗಗನ್ ನೋಟಗಾರ, ಬಾಲಗಾಜ ಗಾಳಿ, ಜಗನ್ನಾಥ, ಶಿವರಾಜಗೌಡ, ಲಕ್ಷ್ಮೀ ಸಬರದ, ಕವಿತಾ ಹೂಗಾರ, ರಾಧಾ ದೊಡ್ಡಮನಿ, ಮಲ್ಲು ಚೌಧರಿ, ನೂರುದ್ದೀನ್ ಗುಡಿಹಿಂದಲ್, ನೇತ್ರಾವತಿ ಮಾಲಗಿತ್ತಿ, ಮಂಜುನಾಥ ಕೋಳೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net