ಎರಡು ತಿಂಗಳಲ್ಲಿ ಬಸ್‌ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ ಶಾಸಕ ಹಾಲಪ್ಪ ಆಚಾರ

25082020 Kukanur visit bus stand
Published on

ಕುಕನೂರು: ಗುಣಮಟ್ಟದ ಕಾಮಗಾರಿಯೊಂದಿಗೆ ಎರಡು ತಿಂಗಳಲ್ಲಿ ಬಸ್‌ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶಾಸಕ ಹಾಲಪ್ಪ ಆಚಾರ್ ಸೂಚಿಸಬೇಕು.

ಪಟ್ಟಣದಲ್ಲಿ ಮಂಗಳವಾರ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಹಳ್ಳಿಗಳಿಂದ ಪಟ್ಟಣಕ್ಕೆ ನಿತ್ಯ ನೂರಾರು ಜನ ಸಂಚರಿಸುತ್ತಾರೆ. ಮಳೆಗಾಲ ಆಗಿದ್ದರಿಂದ ಬಹುಬೇಗ ಸಾರ್ವಜನಿಕರಿಗೆ ನಿಲ್ದಾಣ ಸಮರ್ಪಿಸಬೇಕು. ಎರಡು ತಿಂಗಳಲ್ಲಿ ನಿಲ್ದಾಣ ಉದ್ಘಾಟನೆಗೊಳ್ಳಬೇಕು ಎಂದರು. ಕೆಎಸ್ಸಾರ್ಟಿಸಿ ಡಿಸಿ ಎಂ.ಎ.ಮುಲ್ಲಾ, ಡಿಪೋ ಮ್ಯಾನೇಜರ್ ಸಿ.ಜಿ ಸೊಪ್ಪಿಮಠ, ಪ್ರಮುಖರಾದ ಅಂದಪ್ಪ ಜವಳಿ, ಬಸನಗೌಡ ತೋಂಡಿಹಾಳ, ಶಶಿ ಭಜಂತ್ರಿ, ರಸಿದಸಾಬ್ ಹಣಜಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net