ಎರಡು ಟ್ಯಾಂಕರ್ ಲಾರಿ ನಡುವೆ ಡಿಕ್ಕಿ

Accident
Published on

ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶಿಮ್ಲಾ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶುಕ್ರವಾರ ಎರಡು ಟ್ಯಾಂಕರ್ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ ಲಾರಿ ಡ್ರೈವರ್‌ಗೆ ಗಂಭೀರ ಗಾಯಗೊಂಡಿದ್ದಾರೆ. ತಮಿಳುನಾಡು ಮೂಲದ ದೊರೆರಾಜು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡವರು. ಬಿಎಸ್‌ಪಿಎಲ್ ಕಂಪನಿಗೆ ಸೇರಿದ ನೀರಿನ ಟ್ಯಾಂಕರ್ ಹೆದ್ದಾರಿ ಡಿವೈಡರ್‌ನ ಗಿಡಗಳಿಗೆ ನೀರು ಹಾಕುವ ಸಮಯದಲ್ಲಿ ತಮಿಳುನಾಡಿನ ಲಾರಿ ಡಿಕ್ಕಿ ಹೊಡೆದಿದ್ದರಿಂದ ಚಾಲಕ ಸಿಕ್ಕಾಕಿಕೊಂಡಿದ್ದಾನೆ. ನಂತರ ಕ್ರೇನ್ ಬಳಸಿ ಹರಸಾಹಸದಿಂದ ದೊರೆರಾಜುನನ್ನು ಹೊರ ತಗೆದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ ಎಣ್ಣೆ ಸಾಗಿಸುವ ದುರ್ಘಟನೆ ನಡೆದಿದೆ. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net