ಜಾತ್ರೆಗಳಲ್ಲಿ ಅಡಗಿದೆ ನಾಡಿನ ಪರಂಪರೆ

Devi Jatra festival
ಕುಕನೂರು ಪಟ್ಟಣದ ಅಂಬೇಡ್ಕರ್ ಕಾಲನಿಯ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಉತ್ಸವ ಮೂರ್ತಿ ಮೆರವಣಿಗೆ ಭಾನುವಾರ ಜರುಗಿತು.
Published on

ಕುಕನೂರು: ಪಟ್ಟಣದ ಅಂಬೇಡ್ಕರ್ ಕಾಲನಿಯ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.

ಉತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಮಾತನಾಡಿ, ಶಕ್ತಿ ದೇವತೆ ಆರಾಧಿಸಿ ಭಕ್ತಿಯಿಂದ ಪೂಜಿಸಿದರೆ ನಾಡಿಗೆ ಒಳಿತ್ತಾಗಲಿದೆ. ಮಳೆ, ಬೆಳೆ ಸವೃದ್ಧವಾಗಿ ಸಕಲ ಭಾಗ್ಯಗಳು ದೇವಿಯ ಆಶೀರ್ವಾದದಿಂದ ದೊರೆಯಲಿದೆ. ಜಾತ್ರೆಗಳು ನಮ್ಮ ಪರಂಪರೆಯ ಇತಿಹಾಸಿಕ ಒಳಗೊಂಡಿದ್ದು, ಸಾಂಸ್ಕೃತಿಕ ಜೀವನದ ಮುಖ್ಯ ಪಾತ್ರ ವಹಿಸುತ್ತವೆ. ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆ ಮಾಡುವುದರಿಂದ ಮನೆ ಮನಗಳಲ್ಲಿ ಶಾಂತಿ ನೆಲೆಸುವ ಜತೆಗೆ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

ಬೆಳಗ್ಗೆ ಹೊಳೆಗೆ ತೆರಳಿ ಗಂಗಾಪೂಜೆ ನೆರವೇರಿಸಲಾಯಿತು. ದೇವಿಗೆ ವಿಶೇಷ ಅಲಂಕಾರ ಸೇವೆ ಬಳಿ ಅಗ್ನಿ ಪ್ರವೇಶ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಆವರಣದಲ್ಲಿ ಅರ್ಚಕರಿಂದ ಕಾಯಿ ಪವಾಡ ಜರುಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ದೇವಿ ಮೆರವಣಿಗೆ ನಡೆಯಿತು.

ತಾಲೂಕು ಬಿಜೆಪಿ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸವರಾಜ ಹಾಳಕೇರಿ, ಕಳಕಪ್ಪ ಕಂಬಳಿ, ಈರಪ್ಪ ಕುಡುಗುಂಟಿ, ಶಿವಪ್ಪ ಭಂಡಾರಿ, ನಿಂಗಪ್ಪ ಗೋರ್ಲೆಕೊಪ್ಪ, ಚಂದ್ರಪ್ಪ ಆರುಬೆರಳಿನ್, ಮಲಿಯಪ್ಪ ಅಣ್ಣಿಗೇರಿ, ಲಕ್ಷ್ಮಣ ಬಾರಿಗಿಡದ, ಮಾರುತಿ ಭಂಡಾರಿ, ಮಲ್ಲಿಕಾರ್ಜುನ ಗೋರ್ಲೆಕೊಪ್ಪ, ಅಂದಪ್ಪ ಭಂಡಾರಿ, ಮಹಾಂತೇಶ್, ನಾಗರಾಜ, ಶ್ರೀಕಾಂತ್, ದೇವಪ್ಪ ನಿಂಗರಾಜ, ಅಭಿಷೇಕ ಗೊರ್ಲೆಕೊಪ್ಪ, ಶ್ರೀಧರ ಭಂಡಾರಿ, ಬಾಲರಾಜ ಗಾಳಿ, ಮಹಾಂತೇಶ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net