ಕುಕನೂರು: ತಾಲೂಕಿನ ಬಿನ್ನಾಳ ಗ್ರಾಮದ ಶ್ರೀಶರಣಬಸವೇಶ್ವರ ಜಾತ್ರೋತ್ಸವ ನಿಮಿತ್ತ ಮಹಾರೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು.
ನಂದಿ ಕೋಲುಗಳಿಗೆ ಪೂಜೆ ಸಲ್ಲಿಸಿ, ಗ್ರಾಮ ಪ್ರವೇಶದೊಂದಿಗೆ ಜಾತ್ರೆ ಅದ್ದೂರಿಯಾಗಿ ಪ್ರಾರಂಭವಾಯಿತು. ಭಕ್ತರು ಮಹಾ ರಥೋತ್ಸವಕ್ಕೆ ಉತ್ತತ್ತಿ ಎಸೆಯುವುದರ ಮೂಲಕ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಂಡರು. ಮಹಾರಥೋತ್ಸವ ಬನ್ನಿ ಕಟ್ಟಿಗೆ ತಲುಪಿ ಪೂಜೆ ಸಲ್ಲಿಸಿ, ಪುನಃ ಮುಖ್ಯ ಸ್ಥಳಕ್ಕೆ ಆಗಮಿಸಿತು.
ಇದನ್ನೂ ಓದಿ: ಭಕ್ತಿ, ಶ್ರದ್ಧೆ ಮಧ್ಯೆ ಬೊಮ್ಮಯ್ಯ ರಥೋತ್ಸವ
ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ದೇವರು, ಶ್ರೀಬಸವಪ್ರಭ ಸ್ವಾಮೀಜಿ, ಶ್ರೀಬೂದೀಶ್ವರ ಸ್ವಾಮೀಜಿ, ಪ್ರಮುಖರಾದ ಚನ್ನಯ್ಯ ಹಿರೇಮಠ, ಕಳಕಪ್ಪ ಕಂಬಳಿ, ದ್ರಾಕ್ಷಾಯಣಿ ಸಂಗಪ್ಪ ತಹಸಿಲ್ದಾರ್, ಮಹಮ್ಮದ್ ವಾಲಿಕಾರ್, ಲಕ್ಷ್ಮಣ ಚಲವಾದಿ, ಚೆನ್ನಮ್ಮ, ಕಮಲಕ್ಷಿ ಕಂಬಳಿ, ಗುರಪ್ಪ, ಬಸವರಾಜ ಬನ್ನಿಕೊಪ್ಪ, ಸಂಗಪ್ಪ ತಹಸೀಲ್ದಾರ್, ಜೀವನ ಸಾಬ್ ಬಿನ್ನಾಳ ಇದ್ದರು.