

ಕುಕನೂರು: ತಾಲೂಕಿನ ಬೆಣಕಲ್ ಗ್ರಾಮದ ಗುಡ್ಡದ ಶ್ರೀ ಬಸವೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವ ಹಾಗೂ ಕಲಬುರಗಿ ಶರಣ ಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ನಿಮಿತ್ತ 19 ಜೋಡಿ ಸಾಮೂಹಿಕ ವಿವಾಹ ನಡೆಯಿತು. ಗವಿಮಠದ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ, ಹಿರೇಸಿಂದೋಗಿಯ ಶ್ರೀ ಚಿದಾನಂದ ಸ್ವಾಮೀಜಿ ಪಾಲ್ಗೊಂಡು ನವಜೋಡಿಗಳಿಗೆ ಶುಭ ಹಾರೈಸಿದರು. ನಂತರ ಗವಿಶ್ರೀ ದಾಸೋಹ ಸೇವೆಯಲ್ಲಿ ಭಾಗಿಯಾಗಿದರು. 20ಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಆಗಮಿಸಿ ಭೋಜನ ಸವಿದರು. ದಾಸೋಹಕ್ಕೆ ವಾರದಿಂದ ಸಿದ್ಧ್ದತೆ ಕೈಗೊಳ್ಳಲಾಗಿತ್ತು. ಆಟೋ ಚಾಲಕರ ಸಂಘದಿಂದ 750 ಕೆಜಿ ಬಾಳೆ ಹಣ್ಣು, ಮಹದೇವಪ್ಪ ಹಳ್ಳಿಕೇರಿ, ಶರಣಪ್ಪ ಹಳ್ಳಿಕೇರಿ ಅವರು 151 ಲೀಟರ್ ಹಾಲು, ಹನುಮಪ್ಪ ಹಂಚಿನಾಳ ಅವರು 1 ಕ್ವಿಂಟಾಲ್ ಜಿಲೇಬಿ, ನಿಂಗಮ್ಮ ಪಟ್ಟೆದ, ಹನುಮವ್ವ ಸಂಗನಾಳ, ಮಂಜವ್ವ ಮುಕ್ತಾಪೂರ ಎಂಬುವರು 1 ಕ್ವಿಂಟಾಲ್ ಜಿಲೇಬಿ, ಎಪಿಜೆ ಅಬ್ದುಲ್ ಕಲಾಂ ಬಾಯ್ಸ ತಂಡ 10 ಸಾವಿರ ಗುಲಾಬ್ ಜಾಮೂನು ನೀಡಿತು. ಅಭಿನವ ಶ್ರೀ ಗೆಳೆಯರ ಬಳಗವು ನವ ಜೋಡಿಗಳಿಗೆ 19 ಜತೆ, ಉಡುಚಮ್ಮ ದೇವಿ ಸ್ವ ಸಹಾಯ ಸಂಘ 5 ಜತೆ ಕಾಲುಂಗರ ನೀಡಿದವು.