ಸಂತ ಸೇವಾಲಾಲ್ ಪೋಸ್ಟರ್ ಹರಿದ ಕಿಡಿಗೇಡಿಗಳು

poster-torn miscreants
ಕುಕನೂರಿನ ಗುದ್ನೇಪ್ಪನ ಮಠದ ಬಳಿಯ ಸಂತ ಶ್ರೀ ಸೇವಾಲಾಲ್ ವೃತ್ತದಲ್ಲಿ ಅಂಟಿಸಿದ್ದ ಸೇವಾಲಾಲರ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹರಿದು ಹಾಕಿರುವುದನ್ನು ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಪರಿಶೀಲಿಸುತ್ತಿರುವುದು.
Published on

ಕುಕನೂರು: ಪಟ್ಟಣದ ಗುದ್ನೇಪ್ಪನ ಮಠದಿಂದ ಕಕ್ಕಿಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಸಂತ ಶ್ರೀ ಸೇವಾಲಾಲ್ ವೃತ್ತದಲ್ಲಿ ಅಂಟಿಸಿದ್ದ ಶ್ರೀ ಸೇವಾಲಾಲರ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹರಿದುಹಾಕಿದ್ದಾರೆ.

ಬಂಜಾರ ಸಮಾಜದ ಮುಖಂಡ ಸುರೇಶ್ ಬಳೂಟಗಿ ಮಾತನಾಡಿ, ನಾವು ಸೋಮವಾರ ಒಳಮೀಸಲಾತಿಯ ಅನ್ಯಾಯ ವಿರುದ್ಧ ಪ್ರತಿಭಟನೆ ನಡೆಸಿದ್ದೆವು. ಇದನ್ನು ಸಹಿಸದ ಅನ್ಯಜಾತಿಯವರು ಈ ಕೃತ್ಯ ಎಸಗಿದ್ದಾರೆ. ಪೊಲೀಸ್ ಇಲಾಖೆ ಕೂಲಂಕಷವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡಬೇಕು. ನಮ್ಮ ಧರ್ಮ ಗುರುಗಳನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದು, ಕುಕನೂರು ಠಾಣೆಯಲ್ಲಿ ಕಿಡಿಗೇಡಿಗಳ ಪತ್ತೆಗೆ ದೂರು ದಾಖಲಾಗಿದೆ.

ಬಂಜಾರ ಸಮಾಜದ ಮೇಘರಾಜ ಬಳಗೇರಿ, ಹಂಪಣ್ಣ ಕಟ್ಟಿಮನಿ, ಕುಮಾರ ಬಳಗೇರಿ, ಜಿತು ನಾಯಕ, ಯಮನೂರ ಭಾನಾಪುರ, ಪ್ರಕಾಶ ಬಳಗೇರಿ, ಮಹೇಶ ಕಾರಭಾರಿ, ತಿರುಪತಿ ತಲ್ಲೂರು, ಕಿರಣ ರಾಥೋಡ, ನಾಗರಾಜ ಭಾನಾಪುರ, ಸೋಮಪ್ಪ ಚಿಕೇನಕೊಪ್ಪ, ಅರ್ಜುನ ಕಾರಭಾರಿ, ದುರ್ಗೇಶ್ ಕಟ್ಟಿಮನಿ, ಹನುಮಂತಪ್ಪ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net