ಎಪಿಎಂಸಿ ಅಧ್ಯಕ್ಷ ಈರಣ್ಣ ಹಳ್ಳಿಕೇರಿ, ಉಪಾಧ್ಯಕ್ಷರಾಗಿ ಬಸವರಾಜ ಕುಡಗುಂಟಿ ಅವಿರೋಧ ಆಯ್ಕೆ

01062020 Kukanoor Yelburga APMC Elected
Published on

ಕುಕನೂರು: ಪಟ್ಟಣದ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಈರಣ್ಣ ಹಳ್ಳಿಕೇರಿ ಹಾಗೂ ಉಪಾದ್ಯಕ್ಷರಾಗಿ ಬಸವರಾಜ ಕುಡಗುಂಟಿ ಆಯ್ಕೆಯಾದರು.

ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಈರಣ್ಣ ಹಳ್ಳಿಕೇರಿ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಹಂಚ್ಯಾಳಪ್ಪ ತಳವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಸವರಾಜ ಕುಡಗುಂಟಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಸದಸ್ಯ ಬಸವರಾಜ ಕುಡಗುಂಟಿ ಅವಿರೋಧ ಆಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಈರಣ್ಣ ಹಳ್ಳಿಕೇರಿ ಅವರು 15ರಲ್ಲಿ 9 ಮತ ಪಡೆಯುವ ಗೆಲವು ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net