ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟಿನ ಕೊರತೆ; ಕುಕನೂರಿನ ಅನ್ನದಾನೀಶ್ವರ ಮಠದ ಶ್ರೀ ಮಹಾದೇವ ದೇವರು ಹೇಳಿಕೆ

29012021 Kukanoor religion awareness
Published on

ಕುಕನೂರು: ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಧರ್ಮದ ಆಚಾರ ವಿಚಾರ ಅಳವಡಿಸಿಕೊಂಡಾಗ ಮಾತ್ರ ಎಲ್ಲ ಉಪ ಪಂಗಡಗಳು ಒಂದಾಗಲು ಸಾಧ್ಯ ಎಂದು ಕುಕನೂರಿನ ಅನ್ನದಾನೀಶ್ವರ ಮಠದ ಶ್ರೀ ಮಹಾದೇವ ದೇವರು ಹೇಳಿದರು.

ತಾಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ಕುಕನೂರಿನ ಅನ್ನದಾನೀಶ್ವರ ಮಠದಿಂದ ಶುಕ್ರವಾರ ಮನೆ ಮನೆ ಲಿಂಗಧಾರಣ, ರುದ್ರಾಕ್ಷಿಧಾರಣ ಹಾಗೂ ಧರ್ಮ ಜಾಗೃತಿ ಪಾದಯಾತ್ರೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಧರ್ಮದ ಅರಿವು ಮೂಡದೆ ಸಂಸ್ಕಾರವಂತರಾಗಲು ಸಾಧ್ಯವಿಲ್ಲ. ಧರ್ಮದಿಂದ ಬದುಕು ಕಟ್ಟಿಕೊಂಡ ಎಷ್ಟೋ ಜನ ದುಶ್ಚಟಗಳಿಂದ ಮುಕ್ತರಾಗಿದ್ದಾರೆ. ಸಮಾಜದದಲ್ಲಿ ಗೌರವ ಸಿಗಬೇಕಾದರೆ ದುಶ್ಚಟಗಳಿಂದ ಮುಕ್ತಿ ಹೊಂದಬೇಕು. ನಿತ್ಯ ಲಿಂಗಪೂಜೆ ಮಾಡಿಕೊಂಡು ದೇವರ ಸ್ಮರಣೆಯಲ್ಲಿ ಕಾಯಕ ಮಾಡುತ್ತ ಜೀವನ ಸಾಗಿಸಬೇಕು ಎಂದರು.

ಗ್ರಾಪಂ ಸದಸ್ಯ ಬಸಯ್ಯ ಕರಡಿ ಮಾತನಾಡಿದರು. ಶ್ರೀಮಠದ ಲಿಂಗಧಾರಣ ಸಮಿತಿ ಅಧ್ಯಕ್ಷ ಪ್ರಭು ಶಿವಶಿಂಪರ, ಪ್ರಮುಖರಾದ ವೀರಭದ್ರಪ್ಪ ಬೆದವಟ್ಟಿ, ಆನಂದ ಕುಕನೂರ, ವೀರಯ್ಯ ಸಾಲಿಮಠ, ಹುಚ್ಚಯ್ಯ ಬಿಕ್ಷಾವತಿಮಠ, ಶರಣಯ್ಯ, ಹುಚ್ಚಯ್ಯ ಅಂಟಿ, ಬಸಯ್ಯ ನಿಟ್ಟಾಲಿ, ಶಿವಯ್ಯ ಕರಡಿ, ಮಲ್ಲಯ್ಯ ಅಂಟಿ, ಸೋಮಶೇಖರಯ್ಯ ಕಲ್ಮಠ, ದ್ಯಾಮನಗೌಡ ಪೋಲಿಸ್ ಪಾಟೀಲ, ಮಲ್ಲಯ್ಯ ದೇವರಾಳ, ಬಸಯ್ಯ, ಶಿವರಾಜಗೌಡ್ರ, ಸುನೀಲ ಬಂಗಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net