ಕುಕನೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಗೈರು, ಒಂದು ಮತ ಅಂತರದಲ್ಲಿ ಗೆದ್ದ ಬಿಜೆಪಿ

03112020 Kukanoor PP Election BJP PResident
Published on

ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಕಾಂಗ್ರೆಸ್ ಸದಸ್ಯೆ

ಕುಕನೂರು: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಶಂಭು ಜೋಳದ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್‌ನ ಗೀತಾ ಮಹಾಂತೇಶ ಜಂಗ್ಲಿ ಬುಧವಾರ ಆಯ್ಕೆಯಾದರು.

ಬಿಜೆಪಿ-ಕಾಂಗ್ರೆಸ್ ಸಮಬಲ ಹೋರಾಟದ ಹಾದಿಯಲ್ಲಿದ್ದ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರ ಗೈರಿನಿಂದ ಬಿಜೆಪಿಗೆ ಅಧ್ಯಕ್ಷ ಗಿರಿ ಒಲಿದಿದೆ. ಬಿಜೆಪಿ ಅಭ್ಯರ್ಥಿ ಶಂಭು ಜೋಳದಗೆ ಶಾಸಕ, ಸಂಸದರ ಮತ ಸೇರಿ 10, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೆಹೆಮಾನಸಾಬ್ ಮಕ್ಕಪ್ಪನವರಿಗೆ 9 ಮತಗಳು ದೊರಕಿವೆ. ಸ್ವಪಕ್ಷ ಕಾಂಗ್ರೆಸ್‌ನ ಪಪಂ ಸದಸ್ಯ ಯಲ್ಲಪ್ಪ ಕಲ್ಮನಿ ಗೈರಿನಿಂದ ರೆಹೆಮಾನಸಾಬ್ ಹಿನ್ನಡೆ ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಗೀತಾ ಮಹಾಂತೇಶ ಜಂಗ್ಲಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಕಿರಣಕುಮಾರ್, ಪಪಂ ಮುಖ್ಯಾಧಿಕಾರಿ ಶ್ರೀಶೈಲಗೌಡ, ಶಿರಸ್ತೇದಾರ್ ರವಿಕುಮಾರ ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್, ಪಪಂ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net