ಗೃಹ ರಕ್ಷಕದಳಕ್ಕೆ ಕಚೇರಿ ನೀಡಲು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಮನವಿ

07022020 Kukanoor Homegourd Staff Request
Published on

ಕುಕನೂರು: ಪಟ್ಟಣದ ಗೃಹ ರಕ್ಷಕದಳ ಘಟಕ ಕಚೇರಿಗೆ ಸರ್ಕಾರಿ ಕಟ್ಟಡ ಒದಗಿಸಬೇಕೆಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಗೃಹ ರಕ್ಷಕದಳದ ಸಿಬ್ಬಂದಿ ಶುಕ್ರವಾರ ಮನವಿ ಸಲ್ಲಿಸಿದರು.

ಪಟ್ಟಣದ ನಾಡ ಕಚೇರಿಯ ಒಂದು ಕೊಠಡಿಯಲ್ಲಿ ಘಟಕದ ಕಚೇರಿ ಕೆಲಸ ನಿರ್ವಹಿಸಲಾಗುತ್ತಿತ್ತು. ಈ ಕಚೇರಿಯ ಕಟ್ಟಡ ಕೆಡವಿ ವಿಸ್ತರಣೆ ಮಾಡುವುದಾಗಿ ತಿಳಿಸಿದಾಗ ಅಲ್ಲಿಂದ ಬೇರೆಡೆ ಸ್ಥಳಾಂತರಿಸಲಾಗಿದೆ. ಪದೇಪದೆ ಗೃಹ ರಕ್ಷಕದಳ ಸಿಬ್ಬಂದಿಗೆ ಕಚೇರಿ ಇಲ್ಲವಾಗಿದ್ದರಿಂದ ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತದೆ. ಕಚೇರಿಯಾದರೆ ಎಲ್ಲ ಸಿಬ್ಬಂದಿ ಹಾಗೂ ಮೇಲಧಿಕಾರಿಗಳಿಗೆ ಅನುಕೂಲವಾಗುತ್ತದೆ. ಆದಷ್ಟು ಬೇಗ ತಹಸಿಲ್ ಕಚೇರಿ ಹಿಂಭಾಗದಲ್ಲಿರುವ ಸರ್ಕಾರದ ಖಾಲಿ ಕೊಠಡಿ ಇದ್ದು ಅದನ್ನು ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಪಪಂ ಮುಖ್ಯಾಧಿಕಾರಿ ಶ್ರೀಶೈಲ್‌ಗೌಡ ಸಂಕನಗೌಡ್ರ, ಗೃಹ ರಕ್ಷಕದಳದ ಸಿಬ್ಬಂದಿ ಬಾಳಪ್ಪ ಯತ್ನಟ್ಟಿ, ಸೀಮಣ್ಣ ಕಂಬಳಿ, ರುದ್ರಪ್ಪ ಮದರಿ, ಈರಪ್ಪ ಭಂಗಿ, ಜಗದೀಶ ಮ್ಯಾಗಳಮನಿ, ಶರಣಪ್ಪ ಚೌಡಿ, ಈರಪ್ಪ ಶಿಳಗಣ್ಣವರ, ಪ್ರಕಾಶ ಶಿರೂರು, ಮಾರುತಿ ತಳಕಲ್, ಮಹಾದೇವಪ್ಪ ಬೆದವಟ್ಟಿ, ಪ್ರಕಾಶ ಗವಿಸಿದ್ದಪ್ಪ, ಬಸವರಾಜ, ಗಣೇಶ, ತಿಪ್ಪಣ್ಣ ಶೈಲಪ್ಪ, ಪಪಂ ಸದಸ್ಯರು ಮತ್ತಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net