

ಕುಕನೂರು: ಸರ್ಕಾರಿ ನೌಕರರ ಎನ್‌ಪಿಎಸ್ ಯೋಜನೆ ಸಂಪೂರ್ಣ ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ತಾಲೂಕಿನ ಮಸಬಹಂಚಿನಾಳದ ಬಿಜೆಪಿ ಕಚೇರಿಯಲ್ಲಿ ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘ ಶಾಸಕ ಹಾಲಪ್ಪ ಆಚಾರ್‌ಗೆ ಭಾನುವಾರ ಮನವಿ ಸಲ್ಲಿಸಿತು.
ರಾಜ್ಯದಲ್ಲಿ 2006ರಿಂದ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿರುವ ನೌಕರರರಿಗೆ ನೂತನ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ರದ್ದುಪಡಿಸಿ ಎಲ್ಲ ನೌಕರರಿಗೆ ಏಕರೂಪದ ಪಿಂಚಣಿ ವ್ಯವಸ್ಥೆ ಜಾರಿ ಗೊಳಿಸಬೇಕು. ಇದುವರೆಗೆ ನಿವೃತ್ತಿ, ಮರಣ ಹೊಂದಿದ ಎನ್.ಪಿ.ಎಸ್ ನೌಕರರು ಹಾಗೂ ಅವರ ಕುಟುಂಬ ಅರೆಕಾಸು ಹಣ ಮಾತ್ರ ತಲುಪಿದೆ. ಹಲವಾರು ಕುಟುಂಬದವರ ಸ್ಥಿತಿ ಚಿಂತಾಜನಕವಾಗಿದೆ. ಭಾರತ ಸಂವಿಧಾನದ ಪರಿಚ್ಛೇದ 131 ರನ್ವಯ ಪಿಂಚಣಿ ಎಂಬುವುದು ನೌಕರರ ಸಂದ್ಯಾಕಾಲದ ಹಕ್ಕಾಗಿ ಸರ್ಕಾರ ಕಾಣಬೇಕಿದೆ ಎಂಬುದನ್ನು ಸರ್ಕಾರ ಮನದಟ್ಟು ಮಾಡಬೇಕಿದೆ. ಎಂದು ಒತ್ತಾಯಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ, ಕಾರ್ಯದರ್ಶಿ ಪೀರಸಾಬ್ ದಪೇದಾರ, ಖಜಾಂಚಿ ಅಶೋಕ ಮಾದಿನೂರ, ರಾಜ್ಯ ಪರಿಷತ್ ಸದಸ್ಯ ಶರಣಪ್ಪ ಕೆಳಗಿನಮನಿ, ಪದಾಧಿಕಾರಿಗಳಾದ ಚನ್ನಬಸಯ್ಯ ಸರಗಣೇಚಾರ್, ಶರಣಪ್ಪ ವಿರುಪಾಪೂರ, ಮೊಕ್ಷಮ್ಮ, ಮಹಾಂತೇಶ ಭಜಂತ್ರಿ, ಸುರೇಶ ಮಡಿವಾಳರ, ಬಾಬುಸಾಬ್ ಗುಡಿಹಿಂದಲ್, ವೀರನಗೌಡ ಪಾಟೀಲ ಇತರರಿದ್ದರು.