ಹೊಸತನ ಕಲಿಸುವಿಕೆಯೇ ವಿಜ್ಞಾನ

28022020 Kukanoor Science Day
Published on

ಶಿಕ್ಷಕ ಶಿವಕುಮಾರ ವ್ಯಾಖ್ಯಾನ | ವಿಜ್ಞಾನ ದಿನ ಆಚರಣೆ

ಕುಕನೂರು: ವಿಜ್ಞಾನ ಅಭ್ಯಾಸ ಮಾಡಿದಷ್ಟು ಹೇರಳ ಜ್ಞಾನ ನೀಡುತ್ತದೆ ಎಂದು ವಿಜ್ಞಾನ ಶಿಕ್ಷಕ ಶಿವಕುಮಾರ ಹುಚನೂರ ಹೇಳಿದರು.

ಇಟಗಿಯ ಶ್ರೀ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶುಕ್ರವಾರ ವಿಜ್ಞಾನ ದಿನ ಆಚರಿಸಿ ಮಾತನಾಡಿದರು. ಹೊಸ ಆವಿಷ್ಕಾರ ಜತೆಗೆ ನೂತನ ತಂತ್ರಜ್ಞಾನಗಳು ವಿಜ್ಞಾನದ ಅಂಗಗಳು. ಹೊಸತನ್ನು ಕಲಿಸುವಿಕೆಯೆ ವಿಜ್ಞಾನ. ವಿಷಯವಾರು ಖಚಿತತೆಯನ್ನು ವಿಜ್ಷಾನ ಪ್ರಸ್ತುತಪಡಿಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಬೇಕು ಎಂದರು.

ಸರ್. ಸಿ.ವಿ ರಾಮನ್ ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಾದ ರಂಜಿತಾ, ಚೈತ್ರಾ, ಬಸಮ್ಮ, ಶಿಲ್ಪಾ ಪ್ರದರ್ಶಿಸಿ ಗಮನ ಸೆಳೆದರು. ಮುಖ್ಯಶಿಕ್ಷಕ ಜಿ.ವಿ ಅಂಗಡಿ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ವಾಯ್.ಆರ್ ಪೂಜಾರ, ಎನ್.ಎಚ್ ದಾದ್ಮಿ, ಎಸ್.ವಿ ಜತ್ತಿ, ಎನ್.ಆರ್ ಜಂಗಲಿ, ಕೆ.ಎಂ ವೆಂಕಟಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net