

ಕುಕನೂರು: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣ ಮೂಲಕ ಗುದ್ನೇಪ್ಪನಮಠವರೆಗಿನ ರಸ್ತೆ ಅಗಲೀಕರಣ ಕಾರ್ಯ ಕೈಬಿಡಬೇಕೆಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಕಲ್ಲಪ್ಪ ಮರಡಿ ಒತ್ತಾಯಿಸಿದರು.
ರಸ್ತೆ ಅಗಲೀಕರಣಕ್ಕಾಗಿ ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಇದರಿಂದ ಬೀದಿ ಬದಿ ವ್ಯಾಪಾರಿಗಳ ಜೀವನ ನಿರ್ವಹಣೆ ಕಷ್ಟವಾಗಲಿದೆ. ಈಗಾಗಲೇ ಲಾಕ್‌ಡೌನ್ ಕಾರಣಕ್ಕೆ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದು, ಮತ್ತಷ್ಟು ತೊಂದರೆ ನೀಡಿದಂತೆ ಆಗಲಿದೆ. ಇದರಿಂದಾಗಿ ಪಪಂ ಆಡಳಿತ ತರಕಾರಿ, ಹೂ, ಹಣ್ಣಿನ ಅಂಗಡಿ, ಹೋಟೆಲ್, ಪಾನ್ ಶಾಪ್ ಇತ್ಯಾದಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬೀದಿ ಬದಿ ವ್ಯಾಪಾರದಿಂದಲೇ ಕಳೆದ 30 ವರ್ಷಗಳಿಂದ ಜೀವನ ಸಾಗಿದೆ. ನಮ್ಮ ಸಮಸ್ಯೆ ಬಗ್ಗೆ ಶಾಸಕ ಹಾಲಪ್ಪ ಆಚಾರ್ ಗಮನಹರಿಸಬೇಕೆಂದು ಕಲ್ಲಪ್ಪ ಮರಡಿ ಕೋರಿದರು. ಸಂಘದ ಉಪಾಧ್ಯಕ್ಷ ಶ್ರೀಕಾಂತ ಮೇಟಿ, ಕಾರ್ಯದರ್ಶಿ ಅಶೋಕ ಶಿವಶಿಂಪರ, ವ್ಯಾಪಾರಸ್ಥರಾದ ಕಳಕಪ್ಪ ಸಬರದ, ಕರಿಯಪ್ಪ ಭಜಂತ್ರಿ, ಈರಮ್ಮ ಭಜಂತ್ರಿ, ದೇವಪ್ಪ ಭಜಂತ್ರಿ, ಮಂಜುನಾಥ ಮತ್ತು ಇತರರಿದ್ದರು.