ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ; ಶಾಸಕ ಹಾಲಪ್ಪ ಆಚಾರ್ ಅಭಿಮತ

02062020 Kukanoor Planting Program
Published on

ಕುಕನೂರು: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಬಳಿ ಮಂಗಳವಾರ ಅರಣ್ಯ ಇಲಾಖೆಯಿಂದ ಗ್ರೀನ್ ಅರ್ಬನ್ ಏರಿಯಾ ಯೋಜನೆಯಲ್ಲಿ 1,800 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅರಣ್ಯ ಇಲಾಖೆಯಿಂದ ಸಸಿ ನಡಲಾಗಿದೆ. ಆದರೆ ಅವುಗಳ ಪಾಲನೆ ಪೋಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎನ್‌ಎಚ್ ರಸ್ತೆಗೆ ಅಡಚಣೆಯಾಗದಂತೆ ಇಲಾಖೆ ಜಾಗೃತಿ ವಹಿಸಿ ಸಸಿ ನೆಡುವುದು ಅಗತ್ಯ ಎಂದರು.

ಪ್ರಭಾರ ಉಪವಲಯ ಸಂರಕ್ಷಣ್ಯಾಧಿಕಾರಿ ಎಸ್.ವೈ. ಬಿಳಗಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಶ್ರೀ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ದೇವರು, ವಲಯ ಅರಣ್ಯಾಧಿಕಾರಿ ಎ.ಎಸ್ ಮುಲ್ಲಾ, ಯಲಬುರ್ಗಾ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ, ಪಪಂ ಮುಖ್ಯಾಧಿಕಾರಿ ಶ್ರೀಶೈಲಗೌಡ, ಸದಸ್ಯ ಶಂಭು ಜೋಳದ, ಅರಣ್ಯ ರಕ್ಷಕ ಮಹಮ್ಮದ್ ಷರೀಫ್, ಪ್ರಮುಖರಾದ ಶಿವಕುಮಾರ ನಾಗಲಾಪೂರಮಠ, ಸಿದ್ಲಿಂಗಯ್ಯ ಉಳ್ಳಾಗಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net