

ಕುಕನೂರು: ತಾಲೂಕಿನ ರಾಜೂರು ಗ್ರಾಮದ ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಗ್ರಾಮದ ರೈತರು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆ ಗದಗ-ವಾಡಿ ರೈಲ್ವೆ ಕಾಮಗಾರಿ ಪ್ರಾರಂಭವಾಗಿದ್ದು, ರಾಜೂರು ಗ್ರಾಮದ ಪಶ್ಚಿಮ ಭಾಗದ ಯರೆ ಜಮೀನುಗಳಿಗೆ ಹೋಗಲು ರೈಲ್ವೆ ಇಲಾಖೆಯಿಂದ ಚಿಕೇನಕೊಪ್ಪ ಮತ್ತು ತೊಂಡಿಹಾಳ ರಸ್ತೆಯಿಂದ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದಂತ್ತಾಗಿದೆ. ಕೂಡಲೇ ರೈಲ್ವೆ ಕಾಮಗಾರಿ ಮಾಡುವಾಗ ಜಮೀನುಗಳಿಗೆ ತೆರಳಲು ರಸ್ತೆ ಸಂಪರ್ಕ ಸರಿಪಡಿಸಿ ನಂತರ ಕಾಂಗಾರಿ ಮುಂದುವರಿಸಬೇಕು. ಈ ಬಗ್ಗೆ ಈಗಾಗಲೇ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಹಾಗು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕಳೆದ 6 ತಿಂಗಳಿಂದ ಅಧಿಕಾರಿ ವರ್ಗಕ್ಕೆ ಈ ವಿಷಯ ಗಮನಕ್ಕೆ ತಂದಿದ್ದೇವೆ. ಜ.5 ರಂದು ರಾಜೂರು ಗ್ರಾಮದಲ್ಲಿ ಅನಿರ್ದಿಷ್ಟ ಅವಧಿ ರಸ್ತೆ ತಡೆ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರಾದ ಶರಣಪ್ಪ ಮಂಡಲಗಿರಿ, ಭೀಮರಡ್ಡೇಪ್ಪ ಮಾದಿನೂರು, ಸಂಗಪ್ಪ ಅಂಗಡಿ, ಶರಣಪ್ಪ ಅರಕೇರಿ, ಮಲ್ಲಪ್ಪ ಗುಡ್ಲಾನೂರು, ಶರಣಪ್ಪ ಮುಂಡರಗಿ, ಕಲ್ಲಪ್ಪ ಅಂಗಡಿ, ಬಸವರಾಜ ಕಲ್ಗುಡಿ, ದೇವಪ್ಪ ಉಪ್ಪಾರ, ಗೊಲ್ಲಪ್ಪ ಅಂಗಡಿ, ಈರಣ್ಣ ರಡ್ಡೇರ, ಅಂದಪ್ಪ ಹಳ್ಳಿಗುಡಿ, ಚನ್ನಬಸಪ್ಪ ಹಳ್ಳಿಗುಡಿ, ಮುದಿಯಪ್ಪ ಕವಲೂರು, ಬಸರಡ್ಡೇಪ್ಪ ಸೋಂಪುರು ಇತರರಿದ್ದರು.