ಕೀರ್ತನೆಗಳಲ್ಲಿ ಅಡಗಿದೆ ಜೀವನದ ಅರ್ಥ; ಸಚಿವ ಹಾಲಪ್ಪ ಆಚಾರ್ ಅಭಿಮತ

22112021 Kukanoor Kanakadas Jayanti
Published on

ಕುಕನೂರು: ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮನೇ ಒಲಿದ. ಕನಕದಾಸರ ಭಕ್ತಿ ಅಗಾಧವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರ ಕೀರ್ತನೆಗಳು ಜೀವನ ಸುಧಾರಣೆಗೆ ದಾರಿದೀಪವಾಗಿವೆ. ಜೀವನದ ಅರ್ಥವೂ ಅಡಗಿದೆ. ಕುಲ ಕುಲ ಎಂದು ಹೊಡೆದಾಡಬಾರದು. ಸರ್ವರೂ ಸಮಾನರು. ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ದಾನ, ಧರ್ಮ, ಸತ್ಯ, ಪ್ರಾಮಾಣಿಕತೆಯಿಂದ ಬದುಕಬೇಕಾಗಿದೆ ಎಂದು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net