ಉದ್ಘಾಟನೆಯಾಗದ ದವಾಖಾನೆ ಸ್ವಚ್ಛತೆ; ಶೀಘ್ರ ಕಾರ್ಯಾರಂಭಿಸುವಂತೆ ಕಾಂಗ್ರೆಸ್‌ನಿಂದ ಒತ್ತಾಯ

Kukanuru Hospital Cleaning
ಕುಕನೂರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡವನ್ನು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸ್ವಚ್ಛಗೊಳಿಸಿದರು.
Published on

ಕುಕನೂರು: ಉದ್ಘಾಟನೆಗೆ ಕಾದಿರುವ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮೇ 9 ರಂದು ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿ ಶೀಘ್ರ ಉದ್ಘಾಟನೆ ಮಾಡುವಂತೆ ಒತ್ತಾಯಿಸಿದ್ದರು. ಉದ್ಘಾಟನೆಗೆ ಪೂರಕವಾಗಿ ಕಾಂಗ್ರೆಸ್ ಕಾರ್ಯಕರ್ತರು ಪೊರಕೆ ಹಿಡಿದು ಧೂಳು ಮತ್ತು ಕಸದಿಂದ ತುಂಬಿದ್ದ ಆಸ್ಪತ್ರೆ ಕಟ್ಟಡವನ್ನು ಸ್ವಚ್ಛಗೊಳಿಸಿದರು.

ಪಪಂ ಮಾಜಿ ಉಪಾಧ್ಯಕ್ಷ ರೆಹೆಮಾನ ಸಾಬ್ ಮಕ್ಕಪ್ಪನವರ್ ಮಾತನಾಡಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆ ಉದ್ಘಾಟನೆಗೆ ಯಾರೂ ಕಾಳಜಿ ತೋರಿಸುತ್ತಿಲ್ಲ. ಶೀಘ್ರ ಆಸ್ಪತ್ರೆ ಉದ್ಘಾಟನೆಯಾಗಲಿ ಎಂದು ಶುಚಿಗೊಳಿಸಿರುವುದಾಗಿ ತಿಳಿಸಿದರು. ಪ್ರಮುಖರಾದ ಮಲಿಯಪ್ಪ ಅಣ್ಣಿಗೇರಿ, ಸಂಗಮೇಶ ಗುತ್ತಿ, ಮುತ್ತಪ್ಪ ವಾಲ್ಮೀಕಿ, ವೀರಯ್ಯ ತೋಂಟದಾರ್ಯಮಠ, ಗಗನ ನೋಟಗಾರ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net